ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿಯಲ್ಲಿ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಟಿಟಿಡಿ ಆಡಳಿತ ಮಂಡಳಿ ತಿಮ್ಮಪ್ಪನ ವಿಶೇಷ ದರುಶನ ಭಾಗ್ಯ ಕಲ್ಪಿಸಿದೆ.
ಗಾಯಗೊಂಡಿರುವ 35 ಜನರನ್ನು ಕರೆದುಕೊಂಡು ಹೋದ ಟಿಟಿಡಿ ಆಡಳಿತ ಮಂಡಳಿ ತಿಮ್ಮಪ್ಪನ ವಿಶೇಷ ದರ್ಶನ ಮಾಡಿಸಿದೆ. ನಿನ್ನೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು.
ತಿರುಪತಿ ಕಾಲ್ತುಳಿತದಲ್ಲಿ ಆರು ಭಕ್ತರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದುರಂತದ ನಂತರ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.