ತಿರುಮಲದಲ್ಲಿ ಮತ್ತೆ ಹೆಚ್ಚಿದ ಭಕ್ತ ಸಮೂಹ: ತಿಮ್ಮಪ್ಪನ ದರ್ಶನದಲ್ಲಿ ವಿಳಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂರ್ಯಗ್ರಹಣದಿಂದ ದರ್ಶನಕ್ಕೆ ಬ್ರೇಕ್‌ ಬಿದ್ದ ಕಾರಣ ಜೊತೆಗೆ ಶನಿವಾರ ಭಾನುವಾರ ಹಿನ್ನೆಲೆ ತಿರುಮಲದಲ್ಲಿ ಮತ್ತೆ ಭಕ್ತರ ಸಂಖ್ಯೆ ಹೆಚ್ಚಿದೆ. ಶ್ರೀವಾರಿ ಸರ್ವದರ್ಶನಕ್ಕೆ 20 ಗಂಟೆ ಬೇಕು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದರು. ನಿನ್ನೆ 63,512 ಭಕ್ತರು ದರ್ಶನ ಮಾಡಿದ್ದು, ಭಕ್ತರು ಅರ್ಪಿಸುವ ಕಾಣಿಕೆಯಿಂದ ಹುಂಡಿಯ ಆದಾಯ ರೂ. 3.72 ಕೋಟಿ ತಲುಪಿದೆ.

ತಿರುಪತಿಯಲ್ಲಿ ಸರ್ವದರ್ಶನ ಟೈಮ್ ಸ್ಲಾಟ್ ಟೋಕನ್‌ಗಳನ್ನು ನವೆಂಬರ್ 1 ರಿಂದ ನೀಡಲಾಗುವುದು. ಈ ಕುರಿತು ಟಿಟಿಡಿ ಇಒ ಧರ್ಮ ರೆಡ್ಡಿ ತಿಳಿಸಿದ್ದಾರೆ. ತಿರುಪತಿಯ ಭೂದೇವಿ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀನಿವಾಸಮ್‌ನಲ್ಲಿ ಟೋಕನ್‌ಗಳನ್ನು ವಿತರಿಸಲಾಗುವುದು. ಶನಿವಾರ, ಭಾನುವಾರ, ಸೋಮವಾರ ಮತ್ತು ಬುಧವಾರ 20 ರಿಂದ 25 ಸಾವಿರ ಉಚಿತ ದರ್ಶನ ಟೋಕನ್ ನೀಡಲಾಗುವುದು. ಮಂಗಳವಾರ, ಗುರುವಾರ ಮತ್ತು ಶುಕ್ರವಾರ 15,000 ಟೋಕನ್‌ಗಳ ದರದಲ್ಲಿ ಸರ್ವದರ್ಶನ ಟೋಕನ್‌ಗಳನ್ನು ನೀಡಲಾಗುತ್ತದೆ.

ಟೋಕನ್ ಸಿಗದ ಭಕ್ತರು ಯಾವುದೇ ಟೋಕನ್ ಇಲ್ಲದೆ ವೈಕುಂಠಂ ಸರತಿ ಸಾಲಿನಲ್ಲಿ ಕಾದು ತಿಮ್ಮಪ್ಪನ ದರ್ಶನ ಪಡೆಯಬಹುದು. ಟೋಕನ್ ನೀಡುವ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಎಂಜಿನಿಯರಿಂಗ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಡಿಸೆಂಬರ್ 1ರಿಂದ ಪ್ರಾಯೋಗಿಕವಾಗಿ ಬೆಳಗ್ಗೆ 8ರಿಂದ 11.30ರವರೆಗೆ ವಿಐಪಿ ಬ್ರೇಕ್ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!