ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ಲಡ್ಡು ಪ್ರಸಾದದ ಅಪವಿತ್ರ ವಿವಾದ ಸಾಕಷ್ಟು ಸದ್ದು ಮಾಡಿತ್ತು. ಈ ಹಿನ್ನೆಲೆ ಇದೀಗ ತಿರುಮಲ ತಿರುಪತಿ ದೇವಸ್ಥಾನದ (TTD) ಅಧ್ಯಕ್ಷ ಬಿ.ಆರ್ ನಾಯ್ಡು ಅವರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.
ಇದೀಗ ಬಿ.ಆರ್ ನಾಯ್ಡು ಅವರು ತಿರುಮಲದಲ್ಲಿ ಹಿಂದುಯೇತರ 18 ಉದ್ಯೋಗಿಗಳಿಗೆ VRS ನೀಡಿದ್ದಾರೆ.
TTD ಅಧ್ಯಕ್ಷ ಬಿ.ಆರ್ ನಾಯ್ಡು ಅವರ ಪ್ರಕಾರ ತಿರುಮಲದಲ್ಲಿ ಹಿಂದುಯೇತರರಿಗೆ 2 ಆಯ್ಕೆಗಳಿವೆ. ತಿರುಪತಿಯಿಂದ ವರ್ಗಾವಣೆ ಆಗಬೇಕು. ಇಲ್ಲವೇ ಸ್ವಯಂ ನಿವೃತ್ತಿ ಹೊಂದಬೇಕು. ಹಿಂದು ಧರ್ಮದ ಬಗ್ಗೆ ಶ್ರದ್ದೆ, ಭಕ್ತಿ ಇಲ್ಲದವರು ಟಿಟಿಡಿ ಉದ್ಯೋಗಿಗಳಾಗಿ ಇರಬಾರದು. ಈ ಹಿನ್ನೆಲೆಯಲ್ಲಿ ಹಿಂದುಯೇತರರಿಗೆ ಟಿಟಿಡಿ ಸ್ವಯಂ ನಿವೃತ್ತಿ ನೀಡಿ ಗೇಟ್ ಪಾಸ್ ಕೊಟ್ಟಿದೆ.
ಲಡ್ಡು ವಿವಾದದ ಬಳಿಕ ಮೊದಲ ಬಾರಿಗೆ 18 ಹಿಂದುಯೇತರರಿಗೆ VRS ನೀಡಲಾಗಿದೆ. ಇನ್ನೂ ಉಳಿದ ಹಿಂದುಯೇತರ ಉದ್ಯೋಗಿಗಳಿಗೆ ವಿಆರ್‌ಎಸ್ ನೀಡಿಕೆಗೆ ಟಿಟಿಡಿ ಅಧ್ಯಕ್ಷರು ತೀರ್ಮಾನ ಮಾಡಿದ್ದಾರೆ.