ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಮುಖ್ಯಸ್ಥರಾಗಿ ತುಹಿನ್ ಕಾಂತ ಪಾಂಡೆ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಸಂಪುಟದ ನೇಮಕಾತಿ ಸಮಿತಿಯ ಅನುಮೋದನೆಯ ನಂತರ, ಹಣಕಾಸು ಕಾರ್ಯದರ್ಶಿ ಪಾಂಡೆ ಅವರು ಮೂರು ವರ್ಷಗಳ ಅವಧಿಗೆ ಸೆಬಿ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಸೆಬಿ ಹಾಲಿ ಮುಖ್ಯಸ್ಥರಾಗಿರುವ ಮಾಧಬಿ ಪುರಿ ಬುಚ್ ಅವರ ಅಧಿಕಾರಾವಧಿ ಮಾ.1 ರಂದು ಕೊನೆಗೊಳ್ಳಲಿದೆ. ಇವರು 2022ರ ಮಾ.2 ರಂದು ಮೊದಲ ಮಹಿಳಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು.