ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್‌ನಲ್ಲಿ ಸದ್ದು ಮಾಡಿದ್ದ ಸ್ಪರ್ಧಿ ತುಕಾಲಿ ಸಂತೋಷ್ ಇತ್ತೀಚೆಗಷ್ಟೇ ಕಾರೊಂದನ್ನು ಖರೀದಿ ಮಾಡಿದ್ದರು.
ಬಿಗ್‌ಬಾಸ್ ಬಂದ ನಂತರ ತನ್ನ ವರ್ಷಗಳ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದರು. ಇದೀಗ ನಿನ್ನೆಯಷ್ಟೇ ಕಾರು ಅಪಘಾತ ಸಂಭವಿಸಿದೆ.
ತುಕಾಲಿ ಸಂತೋಷ್ ತಮ್ಮ ಕಾರಿನಲ್ಲಿ ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರಕ್ಕೆ ಹೋಗುತ್ತಿದ್ದರು. ಆ ವೇಳೆ ಆಟೋ ಬಂದು ಕಾರಿನ ಬಲ ಭಾಗಕ್ಕೆ ಡಿಕ್ಕಿ ಹೊಡೆದಿತ್ತು. ಆಟೋ ಚಾಲಕ ಜಗದೀಶ್ ಗಂಭೀರವಾಗಿ ಗಾಯಗೊಂಡಿದ್ದರು.
ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಟೋ ಚಾಲಕ ಮೃತಪಟ್ಟಿದ್ದಾರೆ. ಸಣ್ಣ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ ಜಗದೀಶ್ ಅವರಿಗಾಗಿ ಕುಟುಂಬ ಕಣ್ಣೀರಿಡುತ್ತಿದೆ.