ಹೊಸದಿಗಂತ ವರದಿ, ಕಲಬುರಗಿ
ಪುಟಾಣಿ ಮಕ್ಕಳಂತೆ ಪುಟ್ಟ ಕರುವಿಗೆ ತೊಟ್ಟಿಲಲ್ಲಿ ಹಾಕಿ ಅದ್ದೂರಿ ನಾಮಕರಣ ಮಾಡಿದ ಕಾರ್ಯಕ್ರಮವು ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನವನೀತ ಗೋ ಶಾಲೆಯಲ್ಲಿ ನಡೆದಿದೆ.
ತೊಟ್ಟಿಲಿಗೆ ಹೂವಿನಿಂದ ಶೃಂಗಾರ ಮಾಡಿ ಕರುವನ್ನು ಮಕ್ಕಳಂತೆ ತೊಟ್ಟಿಲಿನಲ್ಲಿ ಹಾಕಿ, ಕರುವಿಗೆ ತುಳಸಿ ಎಂದು ನಾಮಕರಣ ಮಾಡಲಾಗಿದೆ.
ಈ ತೊಟ್ಟಿಲು ಕಾರ್ಯಕ್ರಮಕ್ಕೆ ಸೇಡಂ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ನೂರಾರು ಜನ ಮುತೈದೆ ಮಹಿಳೆಯರು ಭಾಗವಹಿಸಿದ್ದರು.
ಇನ್ನು ಕರುವಿಗೂ ಸಹ ಈ ರೀತಿ ಅದ್ದೂರಿ ತೊಟ್ಟಿಲು ಕಾರ್ಯಕ್ರಮ ನಡೆಸಿದಕ್ಕೆ ಗೋವು ಪ್ರೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.