ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು – ಯಶವಂತಪುರ ಮೆಮು ರೈಲು ನಗರದ ರೈಲು ನಿಲ್ದಾಣದಲ್ಲಿ ಇದೇ 27ರಂದು ಬೆಳಗ್ಗೆ 8 ಗಂಟೆಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದಾರೆ.
ನಗರದಿಂದ ಬೆಳಿಗ್ಗೆ 8:45ಕ್ಕೆ ಹೊರಟು 10:25 ಗಂಟೆಗೆ ಯಶವಂತಪುರ ತಲುಪಲಿದೆ. ಅಲ್ಲಿಂದ ಸಂಜೆ 5:45 ಕ್ಕೆ ಹೊರಡುವ ರೈಲು ರಾತ್ರಿ 7:05 ಕ್ಕೆ ತುಮಕೂರು ತಲುಪುತ್ತದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.