ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಭದ್ರಾ ಜಲಾಶಯ ಎರಡನೇ ಬಾರಿಗೆ ಭರ್ತಿಯಾಗುತ್ತಿದ್ದು, ಇಂದು ಸಿದ್ದರಾಮಯ್ಯ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ ಗೇಟ್ 19 ತಾತ್ಕಾಲಿಕ ಗೇಟ್ ಅಳವಡಿಸಿದ 25 ದಿನಗಳ ನಂತರ ನೀರಿನಿಂದ ತುಂಬಿದೆ. ಸಿದ್ದರಾಮಯ್ಯ ಅವರು ನವೀಕರಣದ ನಂತರ ಕಲ್ಯಾಣ-ಕರ್ನಾಟಕದ ಜೀವನದಿ ತುಂಗಭದ್ರಾ ಜಲಾನಯನ ಪ್ರದೇಶಕ್ಕೆ ಬಾಗಿನ ಅರ್ಪಿಸಲು ಯೋಜಿಸಿದ್ದಾರೆ.
ತುಂಗಭದ್ರಾ ಜಲಾಶಯವನ್ನು ಮಧುವಣಗಿತ್ತಿಯಂತೆ ಅಲಂಕರಿಸಲಾಗಿದೆ. ಸೇತುವೆಯ ಮೇಲೆ ಕನ್ನಡ ಧ್ವಜಗಳು ರಾರಾಜಿಸುತ್ತಿವೆ. ಅಲ್ಲದೇ ತಳಿರು ತೋರಣ, ಬಾಳೆಯಿಂದ ಜಲಾಶಯಯವನ್ನು ಅಲಂಕರಿಸಲಾಗಿದೆ.