ಸುರಂಗ ಕುಸಿತ: ರಕ್ಷಣಾ ಕಾರ್ಯಾಚರಣೆ ಸ್ಥಗಿತ, ಕಾರ್ಮಿಕರ ರಕ್ಷಣೆ ಮತ್ತಷ್ಟು ವಿಳಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಕಾಶಿ ಸುರಂಗ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಕಾರ್ಮಿಕರ ರಕ್ಷಣೆಯಲ್ಲಿ ಮತ್ತಷ್ಟು ವಿಂಳಬವಾಗುವ ಸಾಧ್ಯತೆಯಿದೆ. ನಿನ್ನೆ ರಾತ್ರಿ ಅವಶೇಷಗಳನ್ನ ಕೊರೆಯುವ ಸಮಯದಲ್ಲಿ ಕಬ್ಬಿಣದ ಲೋಹವೊಂದು ಅಡ್ಡ ಬಂದಿದ್ದು, ಇನ್ ಲೆಟ್ ಪೈಪ್‌ನ ಮುಂಭಾಗ ಬಾಗಿದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯುಂಟಾಗಿತ್ತು. ಈಗ ಗ್ಯಾಸ್ ಕಟರ್‌ನಿಂದ ಮುಂಭಾಗವನ್ನು ಕತ್ತರಿಸಿ ಬೇರ್ಪಡಿಸುವ ಕಾರ್ಯ ನಡೆಯುತ್ತಿದ್ದು, ಇದರಿಂದಾಗಿ ಪೈಪ್‌ ಅನ್ನು ಒಳಗೆ ಕಳುಹಿಸುವ ಪ್ರಕ್ರಿಯೆ ಸದ್ಯಕ್ಕೆ ಸ್ಥಗಿತಗೊಂಡಿದೆ.

800 ಎಂಎಂ ಪೈಪ್ ಹಾಕುವಾಗ ಎದುರುಗಡೆ ಬಂದ ಕಬ್ಬಿಣದ ರಾಡ್‌ನಿಂದ ಪೈಪ್ ಸ್ವಲ್ಪ ಬಾಗಿದೆ. ಇದರಿಂದ ಮುಂದೆ ಸಾಗುವುದು ಕಷ್ಟವಾಗಿದ್ದು, ತಜ್ಞರ ತಂಡವನ್ನು ಸ್ಥಳಕ್ಕೆ ಕರೆಸಿ ಕಬ್ಬಿಣದ ತುಂಡುಗಳನ್ನು ಕತ್ತರಿಸುವ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.

ರಕ್ಷಣಾ ತಂಡವು ಕಾರ್ಮಿಕರಿಂದ 12 ಮೀಟರ್ ದೂರದಲ್ಲಿದೆ. ಕಾರ್ಮಿಕರನ್ನು ತಲುಪಲು 6 ಗಂಟೆ ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಈ ದುರಸ್ತಿ ಕಾರ್ಯ ನಡೆದರೆ, ಮುಂದಿನ ದಾರಿಯಲ್ಲಿ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ ಎಂದು ರಕ್ಷಣಾ ತಂಡ ಭಾವಿಸಿದೆ.

ನವೆಂಬರ್ 12 ರಿಂದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ಇದೀಗ ಅಂತಿಮ ಹಂತದಲ್ಲಿದ್ದು, ಇಂದು ಕುಸಿದ ಸುರಂಗದಿಂದ ಕಾರ್ಮಿಕರನ್ನು ಹೊರತೆಗೆಯುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!