Friday, March 31, 2023

Latest Posts

ಟರ್ಕಿ ಭೂಕಂಪ : ವರ್ಲ್ಡ್ ಬ್ಯಾಂಕ್‌ನಿಂದ ನೆರವು ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟರ್ಕಿ-ಸಿರಿಯಾ ಸರಣಿ ಭೂಕಂಪಗಳಿಂದ ತತ್ತರಿಸಿದ್ದು, ಮೃತಪಟ್ಟವರ ಸಂಖ್ಯೆ 20 ಸಾವಿರಕ್ಕಿಂತಲೂ ಹೆಚ್ಚಿದೆ. ಭೂಕಂಪದಿಂದ ಜರ್ಜರಿತವಾದ ಟರ್ಕಿ-ಸಿರಿಯಾಗೆ ಆರ್ಥಿಕ ನೆರವು ನೀಡಲು ವರ್ಲ್ಡ್ ಬ್ಯಾಂಕ್ ಮುಂದೆ ಬಂದಿದ್ದು, 1.78 ಬಿಲಿಯನ್ ಡಾಲರ್ ನೆರವು ಘೋಷಿಸಿದೆ.

ಟರ್ಕಿ ಮತ್ತು ಸಿರಿಯಾ ಚೇತರಿಕೆಗೆ ಸಾಕಷ್ಟು ಸಮಯ ಹಾಗೂ ಆರ್ಥಿಕ ನೆರವಿನ ಅಗತ್ಯವಿದ್ದು, ವರ್ಲ್ಡ್ ಬ್ಯಾಂಕ್ ಸಹಾಯ ಮಾಡಲು ಮುಂದಾಗಿದೆ. ಈ ಕೂಡಲೇ ಸಹಾಯ ಒದಗಿಸುತ್ತೇವೆ ಎಂದು ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ತಿಳಿಸಿದ್ದಾರೆ.

ಟರ್ಕಿ-ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಳಡಿ ಇನ್ನಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದೆ. ಕಷ್ಟದ ಸಮಯದಲ್ಲಿ ಭಾರತ, ಅಮೆರಿಕ, ಚೀನಾ, ರಷ್ಯಾ ಕೈ ಜೋಡಿಸಿದ್ದು, ಸಾಕಷ್ಟು ಸಹಾಯ ಮಾಡುತ್ತಿವೆ. ಅಮೆರಿಕ ಆರ್ಥಿಕ ಸಹಾಯಕ್ಕೆ ಮುಂದಾಗಿದ್ದು, 70.19 ಕೋಟಿ ರೂ. ನೆರವು ಘೋಷಣೆ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!