Friday, March 31, 2023

Latest Posts

ಟರ್ಕಿ ಭೂಕಂಪ ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಟೆಕ್ಕಿ ಶವ ಪತ್ತೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟರ್ಕಿಯಲ್ಲಿ ಉಂಟಾದ ಅತಿದೊಡ್ಡ ಭೂಕಂಪ ದೇಶವನ್ನು ಸ್ಮಶಾನವನ್ನಾಗಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಿದ್ದು, ಸದ್ಯ ಭೂಕಂಪನದಿಂದ 26 ಸಾವಿರ ಜನ ಸಾವನ್ನಪ್ಪಿದ್ದಾರೆ. ಟರ್ಕಿಯಲ್ಲಿ 10 ಜನ ಭಾರತೀಯರು ಸಿಲುಕಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ. ಆದರೆ ಓರ್ವ ಬೆಂಗಳೂರಿನ ವ್ಯಕ್ತಿ ಕಾಣೆಯಾಗಿದ್ದಾನೆ ಎಂದು ವರದಿಯಾಗಿತ್ತು. ಇದೀಗ ಕಾಣೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಬೆಂಗಳೂರಿನ ನಿವಾಸಿ, ಟೆಕ್ಕಿ ವಿಜಯ್​ ಕುಮಾರ್ ಮೃತ ದುರ್ದೈವಿ.

ಟೆಕ್ಕಿ ವಿಜಯ್​ ಕುಮಾರ್ ಟರ್ಕಿಯ ಮಾಲತ್ಯ ನಗರದ ಹೋಟೆಲ್​ನ 24 ಅಂತಸ್ತಿನ ಹೋಟೆಲ್​ನ 2ನೇ ಮಹಡಿಯಲ್ಲಿ ತಂಗಿದ್ದರು. ಭೂಕಂಪನದ ನಂತರ ಹೋಟೆಲ್​ ಸಂಪೂರ್ಣ ಕುಸಿದಿತ್ತು. ವಿಜಯ್​ ಕುಮಾರ್ ಫೆಬ್ರವರಿ 6ರಿಂದ ನಾಪತ್ತೆಯಾಗಿದ್ದರು. ಇಂದು ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಬೆಳಿಗ್ಗೆ ಟೆಕ್ಕಿಯ ಪಾಸ್‌ಪೋರ್ಟ್ ಹಾಗೂ ಇತರೆ ವಸ್ತುಗಳು ಪತ್ತೆಯಾಗಿದ್ದವು. ಈಗ ವಿಜಯ ಕುಮಾರ್​ ಶವ ಪತ್ತೆಯಾಗಿದೆ ಎಂದು ಟರ್ಕಿಯ ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!