Sunday, March 26, 2023

Latest Posts

ಭೂಕಂಪ: ಸಾವಿನ ಸಂಖ್ಯೆ 36ಸಾವಿರಕ್ಕೆ ಏರಿಕೆ, ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಕ್ಷಿಣ ಟರ್ಕಿ ಮತ್ತು ವಾಯುವ್ಯ ಸಿರಿಯಾದಲ್ಲಿ ವಿನಾಶಕಾರಿ ಭೂಕಂಪಗಳಿಂದಾಗಿ ಸಾವಿನ ಸಂಖ್ಯೆ 36,000 ದಾಟಿದೆ. ಎರಡೂ ದೇಶಗಳಲ್ಲಿ ಸಾವಿನ ಸಂಖ್ಯೆ 36,000ಕ್ಕೂ ಹೆಚ್ಚು ದಾಖಲಾಗಿದ್ದು, ಮತ್ತು ಹತ್ತಾರು ಸಾವಿರ ಗಾಯಗಳಿಂದ ಬಚಾವ್‌ ಆಗಿದ್ದಾರೆ. ಸೂರಿಲ್ಲದೆ ಜನ ನಿರಾಶ್ರಿತರಾಗಿದ್ದಾರೆ.

ಭೂಕಂಪನದ ಪ್ರತಿಕ್ರಿಯೆಯ ಮೇಲೆ ಸಾರ್ವಜನಿಕರು ಕೆಂಡಾಮಂಡಲರಾಗಿದ್ದು, ಕಟ್ಟಡ ಕುಸಿತಕ್ಕೆ ಕಾರಣವಾದ ಡೆವಲಪರ್‌ಗಳನ್ನು ಟರ್ಕಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ನಡುವೆ 175 ಗಂಟೆಗಳ ನಂತರ ಅವಶೇಷಗಳಡಿಯಲ್ಲಿ ಮಹಿಳೆಯೊಬ್ಬರನ್ನು ರಕ್ಷಿಸಲಾಯಿತು.

ಟರ್ಕಿಯಲ್ಲಿನ ರಕ್ಷಣಾ ಕಾರ್ಯಕರ್ತರು ಹುಡುಕಾಟದ ಪ್ರಯತ್ನಗಳನ್ನು ಮುಂದುವರೆಸಿವೆ. ವಾಯುವ್ಯ ಸಿರಿಯಾದ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿದಿದೆ ಎಂದು ವೈಟ್ ಹೆಲ್ಮೆಟ್ಸ್ ಸ್ವಯಂಸೇವಕ ಸಂಸ್ಥೆ ತಿಳಿಸಿದೆ.

ಭೂಕಂಪದ ಸಂತ್ರಸ್ತರಿಗೆ ಸಂತಾಪ ಸೂಚಿಸುವ ಸಲುವಾಗ ಸೋಮವಾರದಿಂದ ಫೆಬ್ರವರಿ 20 ರವರೆಗೆ ಏಳು ದಿನಗಳ ಕಾಲ ಬಿಳಿ ಹೆಲ್ಮೆಟ್ ಧ್ವಜಗಳನ್ನು ಅರ್ಧಕ್ಕಿಳಿಸಿ ಹಾರಿಸುವುದಾಗಿ ತಂಡ ಟ್ವೀಟ್‌ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!