Sunday, March 26, 2023

Latest Posts

ಟರ್ಕಿ ಸಿರಿಯಾ ಭೂಕಂಪ : 46 ಸಾವಿರ ಗಡಿ ದಾಟಿದ ಮೃತರ ಸಂಖ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಟರ್ಕಿ ಮತ್ತು ಸಿರಿಯಾದಲ್ಲಿ ವಿನಾಶಕಾರಿ ಭೂಕಂಪ ಸಂಭವಿಸಿ ಹನ್ನೆರಡು ದಿನಗಳಾಗಿದ್ದು, ಈವರೆಗೆ 46,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 84,000 ಕ್ಕೂ ಹೆಚ್ಚು ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದಿಂದ ಟರ್ಕಿಯಲ್ಲಿ ಸಾವಿನ ಸಂಖ್ಯೆ 40,642 ರಷ್ಟಿದ್ದರೆ, ನೆರೆಯ ಸಿರಿಯಾವು 5,800 ಕ್ಕೂ ಹೆಚ್ಚು ಸಾವುಗಳನ್ನು ವರದಿ ಮಾಡಿದೆ.

ಮುಂದುವರಿದ ರಕ್ಷಣಾಕಾರ್ಯ :

ಶನಿವಾರ ಕಿರ್ಗಿಸ್ತಾನ್‌ನ ಕಾರ್ಮಿಕರು ದಕ್ಷಿಣ ಟರ್ಕಿಯ ಅಂಟಾಕ್ಯಾ ನಗರದಲ್ಲಿ ಕಟ್ಟಡದ ಅವಶೇಷಗಳಿಂದ ಐವರ ಸಿರಿಯನ್ ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸಿದರು. ಮಗು ಸೇರಿದಂತೆ ಮೂವರನ್ನು ಜೀವಂತವಾಗಿ ರಕ್ಷಿಸಲಾಗಿದೆ. ತಾಯಿ ಮತ್ತು ತಂದೆ ಬದುಕುಳಿದರು ಆದರೆ ಮಗು ಸಾವನ್ನಪ್ಪಿತು ಎಂದು ರಕ್ಷಣಾ ತಂಡ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!