Thursday, March 30, 2023

Latest Posts

ಭೀಕರ ಭೂಕಂಪನಕ್ಕೆ ಟರ್ಕಿ- ಸಿರಿಯಾ ತತ್ತರ: ನೆರವಿಗೆ ನಿಂತ ಸನ್ನಿ ಲಿಯೋನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭೀಕರ ಭೂಕಂಪನಕ್ಕೆ ಟರ್ಕಿ ಮತ್ತು ಸಿರಿಯಾ ತತ್ತರಿಸಿದ್ದು, ಅನೇಕ ರಾಷ್ಟ್ರಗಳು ನಾನಾ ರೀತಿಯಲ್ಲಿ ಸಹಾಯಕ್ಕೆ ಬಂದಿವೆ. ಅದೇ ರೀತಿ ಬಾಲಿವುಡ್ (Bollywood) ನಟಿ ಸನ್ನಿ ಲಿಯೋನ್ (Sunny Leone) ಅವರು ಕೂಡ ನೆರವಿಗೆ ಧಾವಿಸಿದ್ದಾರೆ.

ಸನ್ನಿ ಲಿಯೋನ್ , ಸಿರಿಯಾ ಮತ್ತು ಟರ್ಕಿ ಜನರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಯಾವುದಾರೂ ರೂಪದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ನಿಮ್ಮ ನೆರವಿನ ಅವಶ್ಯಕತೆ ಅವರಿಗಿದೆ ಎಂದು ನಟಿ ತಿಳಿಸಿದ್ದಾರೆ. ಈಗ ಸನ್ನಿ ಲಿಯೋನ್ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚಿಗೆ ಟರ್ಕಿ ಮತ್ತು ಸಿರಿಯಾದಲ್ಲಿ (Turkey- Syria) ಭೀಕರ ಭೂಕಂಪ ಸಂಭವಿಸಿದೆ. ಸಾವು- ನೋವಿನ ಮಧ್ಯೆ ಜನರು ಹೋರಾಡುತ್ತಿದ್ದಾರೆ. ಫೆ.6ರಂದು 7.8ರಷ್ಟು ತೀವ್ರತೆಯ ಭೂಕಂಪ ಅಲ್ಲಿ ಸಂಭವಿಸಿತ್ತು. ಸಾವಿನ ಸಂಖ್ಯೆ 40000 ಸಾವಿರ ದಾಟಿದೆ. ಇಂದಿಗೂ ಅವಶೇಷಗಳಡಿ ಬದುಕುಳಿದವರ ರಕ್ಷಣೆ ಮಾಡಲಾಗತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!