Thursday, August 11, 2022

Latest Posts

ಕಿರುತೆರೆ ನಟ ಚಂದನ್ ಗೆ ಶಾಕ್: ಟೆಲಿವಿಜನ್ ಕ್ಷೇತ್ರದಲ್ಲಿ ಶಾಶ್ವತ ಬ್ಯಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಿರುತೆರೆ ನಟ ಚಂದನ್ ವಿರುದ್ಧ ದುರ್ವರ್ತನೆ ಆರೋಪದ ಹಿನ್ನೆಲೆಯಲ್ಲಿ ತೆಲುಗು ಟಿವಿ ಫೆಡರೇಶನ್ ವತಿಯಿಂದ ಶಾಶ್ವತ ಬಹಿಷ್ಕಾರ ಹಾಕಲಾಗಿದೆ.
ತೆಲುಗು ಟೆಲಿವಿಜನ್, ಡಿಜಿಟಲ್ ಮೀಡಿಯಾದಿಂದ ಚಂದನ್ ಗೆ ಬಹಿಷ್ಕಾರ ಹಾಕಲಾಗಿದೆ. ನಟ ಚಂದನ್ ಅವರನ್ನು ಬಹಿಷ್ಕರಿಸಲು ತೆಲುಗು ಟಿವಿ ಫೆಡರೇಶನ್ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ನಿರ್ಮಾಪಕರ ಮಂಡಳಿಗೆ ಮನವಿ ಸಲ್ಲಿಸಲಾಗಿದೆ.
ಹೈದರಾಬಾದ್ ನಲ್ಲಿ ಧಾರಾವಾಹಿ ಚಿತ್ರೀಕರಣದ ವೇಳೆ ನಟ ಚಂದನ್ ಹಲ್ಲೆ ಮಾಡಿರುವುದಾಗಿ ಆರೋಪಿಸಿ ತಂತ್ರಜ್ಞರು ಕಪಾಳಮೋಕ್ಷ ಮಾಡಿ ಗಲಾಟೆ ನಡೆಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಚಂದನ್, ವಿನಾಕಾರಣ ಘಟನೆ ನಡೆದಿದೆ. ಧಾರಾವಾಹಿಯಲ್ಲಿ ಮುಂದುವರೆಯದಿರಲು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss