ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಬೋಲ್ಡ್ ಉಡುಗೆಗಳಿಂದಾಗಿ ಇಂಟರ್ ನೆಟ್ ನಲ್ಲಿ ಸಖತ್ ಸುದ್ದಿಯಾಗುವ ಕಿರುತೆರೆ ನಟಿ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ಆಸ್ಪತ್ರೆಯ ಹಾಸಿಗೆಯಲ್ಲಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಮಾಹಿತಿಯನ್ನು ಉರ್ಫಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಷೇರ್ ಮಾಡಿದ್ದು, ಬಳಿಕ ಡಿಲಿಟ್ ಮಾಡಿದ್ದರು. ಅವರು ಯಾವ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದು ಬಂದಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಉರ್ಫಿ ಜಾವೇದ್ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು, ಮುಖಕ್ಕೆ ಮಾಸ್ಕ್ ಇರುವುದನ್ನು ಕಾಣಬಹುದು. ಉರ್ಫಿ ಯಾವ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂಬುದು ತಿಳಿದು ಬಂದಿಲ್ಲ.
#UrfiJaved HOSPITALIZED; shares health update on social mediahttps://t.co/asbr4ihgXh pic.twitter.com/WSYjCD8RBI
— Telly Talk (@TellyTalkIndia) January 4, 2024