ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಕಿರುತೆರೆ ನಟಿ ಆರತಿ ಮಿತ್ತಲ್ ವೇಶ್ಯಾವಾಟಿಕೆ ದಂಧೆಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಾಡೆಲ್‌ಗಳನ್ನು ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಅಪ್ನಾಪನ್ ಹಾಗೂ ಕೆಲವು ಸೀರಿಯಲ್‌ಗಳಲ್ಲಿಆರತಿ ನಟಿಸಿದ್ದಾರೆ. ಮುಂಬೈನಲ್ಲಿ ಆರತಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಅನ್ನೋ ಆರೋಪದ ಮೇಲೆ ಪೊಲೀಸರು ಮುಂಬೈಗೆ ತೆರಳಿದ್ದರು. ಮಾರುವೇಶದಲ್ಲಿ ತೆರಳಿ ತಾವು ಗ್ರಾಹಕರು ಎಂದಿದ್ದರು.
ಆಗ ನಡೆದ ಸನ್ನಿವೇಶಗಳು ಹಾಗೂ ಮಾತುಗಳನ್ನು ರೆಕಾರ್ಡ್ ಮಾಡಲಾಗಿತ್ತು. ಎರಡು ಮಾಡೆಲ್‌ಗಳನ್ನು ಆರತಿ ಪೊಲೀಸರಿಗೆ ಪರಿಚಯಿಸಿದ್ದಾರೆ. ಮಾಡೆಲ್‌ಗಳಿಗೆ ಭರ್ಜರಿ ದುಡ್ಡು ಕೊಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು.
ಆರತಿ ಬಳಿ 60 ಸಾವಿರ ಕೊಡಬೇಕು ಎಂದಿದ್ದರು. ಇದಕ್ಕೆ ಪೊಲೀಸರು ಒಪ್ಪಿದ್ದರು. ಹೊಟೇಲ್ ರೂಂನೊಳಗೆ ತೆರಳುವ ಮುನ್ನ ಪೊಲೀಸರಿಗೆ ಆರತಿ ಕಾಂಡೋಮ್ ನೀಡಿದ್ದಾರೆ. ಮಾಡೆಲ್‌ಗಳಿಗೆ 15 ಸಾವಿರ ನೀಡಿ, ಉಳಿದಿದ್ದನ್ನು ಆರತಿ ಇಟ್ಟುಕೊಳ್ಳುತ್ತಿದ್ದರು. ಇದೆಲ್ಲವೂ ರೆಕಾರ್ಡ್ ಆಗಿದ್ದು, ಕೇಸ್ ದಾಖಲಾಗಿದೆ.