ಎಚ್ ಡಿ ರೇವಣ್ಣ ಕಿಡ್ನಾಪ್ ಕೇಸ್ ನಲ್ಲಿ ಟ್ವಿಸ್ಟ್: ನಾಪತ್ತೆಯಾಗಿದ್ದ ಸಂತ್ರಸ್ತೆಯ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಚ್ ಡಿ ರೇವಣ್ಣ ಅವರ ವಿರುದ್ಧ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ತಿರುವು ಸಿಕ್ಕಿದ್ದು, ಅಪಹರಣಕ್ಕೆ ಒಳಗಾದ ಸಂತ್ರಸ್ತ ಮಹಿಳೆ ವಿಡಿಯೋ ಹೇಳಿಕೆ ಒಂದನ್ನು ಬಿಡುಗಡೆ ಮಾಡಿದೆ .

ಅಪಹರಣಕ್ಕೆ ಒಳಗಾದ ಮಹಿಳೆ ಇದೀಗ ಸುಮಾರು 2 ನಿಮಿಷ 35 ಸೆಕೆಂಡುಗಳನ್ನು ಒಳಗೊಂಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದೂ, ವಿಡಿಯೋದಲ್ಲಿ ನನ್ನನ್ನು ಯಾರು ಕಿಡ್ನ್ಯಾಪ್ ಮಾಡಿಲ್ಲ. ನಾನಾಗಿಯೇ ಮನೆಯಿಂದ ಬಂದಿದ್ದೇನೆ. ಭವಾನಿ, ಎಚ್ ಡಿ ರೇವಣ್ಣ, ಪ್ರಜ್ವಲ್ M ಹಾಗೂ ಬಾಬಣ್ಣರಿಂದ ಯಾವುದೇ ರೀತಿಯಾಗಿ ತೊಂದರೆ ಆಗಿಲ್ಲ ಎಂದಿದ್ದಾರೆ.

ನಮ್ಮ ಊರಿನವರು ಏನೇನು ಮಾತನಾಡಿದ್ದನು ಕೇಳಿ ಬೇಸರವಾಗಿತ್ತು ಹೀಗಾಗಿ ನಾಲ್ಕು ದಿನ ಇದ್ದು ಹೋಗೋಣವೆಂದು ನೆಂಟರ ಮನೆಗೆ ಬಂದಿದ್ದೇನೆ. ಸಂಬಂಧಿಕರ ಮನೆಯಲ್ಲಿ ಇದ್ದೇನೆ ಎರಡು ದಿನಗಳ ಬಳಿಕ ನಾನೇ ಬರುತ್ತೇನೆ.ನನ್ನ ಮಗ ಗೊತ್ತಿಲ್ಲದೆ ಗಾಬರಿಯಿಂದಾಗಿ ಹೀಗೆ ಮಾಡಿದ್ದಾನೆ. ನಾಲ್ಕು ಜನ ಕಾಲ ಕಳೆದು ಬರಲು ನಾನೇ ನೆಂಟರ ಮೆನೆಗೆ ಬಂದಿದ್ದೇನೆ.ಟಿವಿ ನೋಡಿದಾಗ ಈ ರೀತಿ ಮಾಡಿದ್ದಾರೆಂದು ನನಗೆ ಗೊತ್ತಾಯಿತು ಎಂದು ಸಂತ್ರಸ್ತೆ ಮಹಿಳೆ ಇವಿಡಿಯೋದಲ್ಲಿ ತಿಳಿಸಿದ್ದಾಳೆ.

ಇನ್ನು ಶಾಸಕ ರೇವಣ್ಣ ಅವರು ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಅಪಹರಣಕ್ಕೆ ಒಳಗಾದ ಮಹಿಳೆಯ ಮಗ ಇತ್ತೀಚಿಗೆ ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದನು. ಯುವಕನ ದೂರಿನ ಮೇರೆಗೆ ಕೆಆರ್ ನಗರದಲ್ಲಿ ಎಚ್ ಡಿ ರೇವಣ್ಣ ಹಾಗೂ ಅವರ ಸಂಬಂಧಿ ಸತೀಶ್ ಬಾಬು ಎನ್ನುವ ವಿರುದ್ಧ FIR ದಾಖಲಾಗಿತ್ತು.

ಅದರಂತೆ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯ ಮಗ ನೀಡಿದ ದೂರಿನ ಆಧಾರದ ಮೇಲೆ ಎಚ್ಡಿ ರೇವಣ್ಣ ಅವರನ್ನು ಕಳೆದ ಕೆಲವು ದಿನಗಳ ಹಿಂದೆ ಬಂಧಿಸಿದ್ದರು

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. ಈ ಹಗರಣದ ನಿರ್ಮಾಣ ನೀವೇ ಈ ವಿಷಯ ದೇಶದಲ್ಲದೆ ವಿದೇಶದಲ್ಲೂ ಹಾರಾಡಿದ್ದಿರ ಇದನ್ನ ಪ್ರತಿಫಕ್ಷದವರು ದ್ವೇಷಕ್ಕಾಗಿ ಒಬ್ಬರವು ಮತ್ತೊಬ್ಬರ ಪೆನ್ ಡ್ರೈವನ್ನು ಪ್ರತಿನಿತ್ಯ ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಬಿಡುವುದಲ್ಲದೆ ಇತರೆಯವರನ್ನು ಹೆದರಿಸುತ್ತಿದ್ದಾರೆ ಪ್ರತಿಯಬ್ಬರ ಮಾನನಷ್ಟಕ್ಕೆ ಹಣ ತುಂಬಲು ಸಾಧ್ಯವೇ. ನಿಮ್ಮ ಪ್ರತಿಯೊಂದು ಹೇಳಿಕೆಗಳು ದಾಖಲೆಗಳು ಸಿಸಿ ಟಿವಿ ನಲ್ಲಿ. ದಾಖಲೆಗಳು ಸ್ಥಿರವಾಗಿವೆ ನ್ಯಾಯಾಲಯ ಮತ್ತು ಸಾರ್ವಜನಿಕರು ಸಾಹಿತಿಗಳು ನಿಮ್ಮ ಹೇಳಿಕೆಗಳನ್ನು ದಿನನಿತ್ಯ ಗಮನಿಸುತ್ತಿದ್ಧರೆ ಎಚ್ಚರ ಇರಲಿ ಎಲ್ಲರನ್ನು ದಡ್ಡರೇನೆಂದು ಭಾವಿಸಬಾರದು.

LEAVE A REPLY

Please enter your comment!
Please enter your name here

error: Content is protected !!