ಮುಡಾ ಹಗರಣಕ್ಕೆ ಟ್ವಿಸ್ಟ್: ಬದಲಿ ನಿವೇಶನ ಕೋರಿ ಸಿದ್ಧರಾಮಯ್ಯ ಬರೆದಿದ್ದ ಪತ್ರ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಡಾ ಹಗರಣ ಸಂಬಂಧ ಸಿಎಂ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸಿದ ಬೆನ್ನಲ್ಲೇ 1984ರಲ್ಲಿ ಸಿದ್ಧರಾಮಯ್ಯ ಅವರು ಮುಡಾಗೆ ಬದಲಿ ನಿವೇಶನಕ್ಕಾಗಿ ಖುದ್ದು ಬರೆದಿದ್ದ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಮೂಲಕ ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತೆ ಆಗಿದೆ.

ಮುಡಾ ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ. ನನಗೆ ಅಧಿಕಾರ, ಹಣದ ಮೇಲೆ ವ್ಯಾಮೋಹವೂ ಇಲ್ಲ. ನಾನು ನನ್ನ ಅಧಿಕಾರವನ್ನು ಶೋಷಿತರು, ದಲಿತರ ಏಳಿಗೆಗಾಗಿಯೇ ಮೀಸಲಿಟ್ಟಿದ್ದೇನೆ ಎಂಬುದಾಗಿ ಇತ್ತೀಚಿಗಷ್ಟೇ ಸಿಎಂ ಸಿದ್ಧರಾಮಯ್ಯ ಹೇಳಿದ್ದರು. ಮುಡಾ ಹಗರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಭಾಗಿಯಾಗಿಯೂ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದರು.ಇದರ ಬೆನ್ನಲ್ಲೇ 1984ರಲ್ಲಿ ಸಿದ್ಧರಾಮಯ್ಯ ಅವರು ಶಾಸಕರಾಗಿದ್ದ ಸಂದರ್ಭ ಮೈಸೂರಿನ ನಗರಾಭಿವೃದ್ಧ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಿಗೆ ಬರೆದಿದ್ದ ಪತ್ರವೊಂದು ವೈರಲ್ ಆಗಿದೆ.

b1aa0da032bb3d09f939161778b7d4bf1308ca3ba37144f142cdc607e7e55aae.webp (360×425)

ವೈರಲ್ ಆಗಿರುವಂತ ಪತ್ರದಲ್ಲಿ ಏನಿದೆ?
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ಸಿದ್ದರಾಮಯ್ಯ ಅವರ ಸಹಿಯನ್ನು ಒಳಗೊಂಡಂತ ಪತ್ರದಲ್ಲಿ ಈ ಕೆಳಗೆ ರುಜು ಮಾಡಿರುವ ಸಿದ್ಧರಾಮಯ್ಯ, ಶಾಸಕರಾದ ನಾನು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುವೇದೆಂದರೇ ನನಗೆ ಜಯನಗರ-ತೊಣಚಿಕೊಪ್ಪಲೆ, 2ನೇ ಹಂತ, ಎಂ ಬ್ಲಾಕ್ ನಲ್ಲಿ ನಿವೇಶನ ಸಂಖ್ಯೆ-9, ಅಳತೆ 50 X 80 ಅನ್ನು ರೂ.30ರಂತೆ ಕೊಟ್ಟಿರುವುದು ಸರಿಯಷ್ಟೇ. ಸದರಿ ನಿವೇಶನಕ್ಕೆ ಬದಲಾಗಿ ಜಯನಗರ-ತೊಣಚಿಕೊಪ್ಪಲೆ ಜಿ ಮತ್ತು ಹೆಚ್ ಬ್ಲಾಕ್ ನಲ್ಲಿ ಖಾಲಿ ಇರುವ 50 X 80 ಅಳತೆವುಳ್ಳ ನಿವೇಶನ ಸಂಖ್ಯೆ 1245 ಅನ್ನು ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂಬುದಾಗಿ ಬರೆಯಲಾಗಿದೆ.

ಇನ್ನೂ ದಿನಾಂಕ 08-05-1984ರಂದು ಸಿದ್ಧರಾಮಯ್ಯ ಅವರು ಬರೆದಿರುವಂತ ಪತ್ರವನ್ನು ರಿಸೀವ್ ಮಾಡಿಕೊಂಡಿರುವಂತ ಮೈಸೂರಿನ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಸದರಿ ಕ್ರಮಕ್ಕೆ ಸೂಚಿಸಿ ಹಿಂಬರಹವನ್ನು ಬರೆದಿರುವುದು ಪತ್ರದಲ್ಲಿ ಕಂಡು ಬಂದಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!