ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ವಿಟರ್ ಮತ್ತೆ ಡೌನ್ ಆಗಿದ್ದು, ಆನೇಕ ಬಳಕೆದಾರರು ಲಾಗ್ ಇನ್ ಆಗಲು ಪರದಾಟುತ್ತಿದ್ದಾರೆ. ಮೆಟಾ ಒಡೆತನದ ವಾಟ್ಸಾಪ್ ಜಾಗತಿಕ ಸ್ಥಗಿತಕ್ಕೆ ಒಳಗಾದ ಒಂದು ದಿನದ ನಂತ್ರ ಟ್ವಿಟರ್ ಡೌನ್ ಆಗಿದೆ.
Downdetector.com ಪ್ರಕಾರ, ಬಳಕೆದಾರರು ಟ್ವಿಟರ್ ಬಳಸುವಾಗ ಸಂಭಾವ್ಯ ಸಮಸ್ಯೆಗಳನ್ನು ಸೂಚಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೆಹಲಿ, ಕೋಲ್ಕತಾ, ಮುಂಬೈ, ಬೆಂಗಳೂರು ಮತ್ತು ಇತರ ಭಾರತೀಯ ನಗರಗಳಲ್ಲಿ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ . ಸಾಮಾಜಿಕ ಜಾಲತಾಣದಲ್ಲಿ ಅನೇಕರು ದೂರು ನೀಡಿದ್ದಾರೆ.