ನಿಯಮ ಉಲ್ಲಂಘನೆ ಆರೋಪದಲ್ಲಿ ಸುದ್ದಿ ಸಂಸ್ಥೆ ANI ಖಾತೆಯನ್ನೂ ಬ್ಲಾಕ್ ಮಾಡಿದ ಟ್ವಿಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟ್ವಿಟರ್ ನಿಯಮಗಳ ಉಲ್ಲಂಘಿಸಿದರೆ ಎಂದು ಪ್ರಮುಖ ಸುದ್ದಿ ಸಂಸ್ಥೆ ಎಎನ್ ಐ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ.
ಎಎನ್‌ಐ ಸಂಪಾದಕಿ ಸ್ಮಿತಾ ಪ್ರಕಾಶ್ ತಮ್ಮ ಖಾತೆಯ ಮೂಲಕ ಅನುಯಾಯಿಗಳಿಗೆ ಈ ವಿಷಯ ತಿಳಿಸಿದ್ದಾರೆ.

ಶನಿವಾರ ಮಧ್ಯಾಹ್ನ ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ ANI ಪೇಜ್​​ನ್ನು ಇದ್ದಕ್ಕಿದ್ದಂತೆ ನಿರ್ಬಂಧಿಸಿದೆ. ಅನೇಕ ANI ಟ್ವಿಟರ್​​ ಖಾತೆಯನ್ನು ಹುಡುಕಿದಾಗ ಈ ಖಾತೆ ಅಸ್ತಿತ್ವದಲ್ಲಿಲ್ಲ ಎಂದು ಬರೆಯಲಾಗಿದೆ.

‘ಎಎನ್‌ಐ ಖಾತೆಯನ್ನು ಬ್ಲಾಕ್ ಮಾಡಿದೆ. ಖಾತೆಯನ್ನು ರಚಿಸುವವರ ಕನಿಷ್ಠ 13 ವರ್ಷವಾಗಿರಬೇಕು ಎಂಬ ನಿಯಮವನ್ನು ಹೊಂದಿರಬೇಕು ಎಂದು ಟ್ವಿಟರ್ ಉಲ್ಲೇಖಿಸಿದೆ ಎಂದು ಸ್ಮಿತಾ ಪ್ರಕಾಶ್ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ತಾವು ಹಂಚಿಕೊಂಡ ಸ್ಕ್ರೀನ್‌ಶಾಟ್ ಟ್ವೀಟ್​​ನ್ನು ಟ್ವಿಟರ್ ಮುಖ್ಯಸ್ಥ ಎಲೋನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಇದರ ಜತೆಗೆ ನಾವು ನಮ್ಮ ಖಾತೆಯನ್ನು 13 ವರ್ಷಲ್ಲ ಅದಕ್ಕಿಂದ ಅಧಿಕ ವರ್ಷಗಳ ವರೆಗೆ ನಿವರ್ಹಿಸುತ್ತಿದ್ದೇವೆ’ ಎಂದು ಸ್ಮಿತಾ ಪ್ರಕಾಶ್ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!