ಟ್ವಿಟ್ಟರ್‌ನ ಹೊಸ ಫೀಚರ್: ಅಕ್ಷರಗಳ ಮಿತಿ 280 ರಿಂದ 2,500ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟ್ವಿಟ್ಟರ್‌ ತನ್ನ ಅಕ್ಷರ ಮಿತಿಯನ್ನು ಏರಿಕೆ ಮಾಡಿದೆ. 280ಅಕ್ಷರಗಳಿಂದ 2,500ಕ್ಕೆ ಹೆಚ್ಚಿಸಲು ಯೋಜಿಸಿದೆ. ಮೊದಲು ಟ್ವಿಟ್ಟರ್‌ನಲ್ಲಿ ಏನನ್ನಾದರೂ ಬರೆಯಲು ಮತ್ತು ಪೋಸ್ಟ್ ಮಾಡಬೇಕೆಂದರೆ ಕೇವಲ 280 ಅಕ್ಷರಗಳನ್ನು ಬರೆಯಬೇಕಾಗಿತ್ತು ಇಲ್ಲವೇ ಮತ್ತೊಂದು ಟ್ವೀಟ್‌ ಮಾಡಿ ಲಿಂಕ್‌ ಮಾಡಬೇಕಿತ್ತ. ಇದೀಗ ಆ ಕಸರತ್ತು ಮಾಡಬೇಕಿಲ್ಲ. ಒಂದೇ ಟ್ವೀಟ್‌ನಲ್ಲಿ ಸುಮಾರು 2,500ಪದಗಳನ್ನು ಬಳಸಬಹುದು.  ಈ ನಿಟ್ಟಿನಲ್ಲಿ `ನೋಟ್ಸ್’ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಲಾಗುವುದು. ಈ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಲಭ್ಯವಾದ ನಂತರ, ಬಳಕೆದಾರರು ತಮ್ಮದೇ ಆದ ದೀರ್ಘ ಸಂದೇಶಗಳನ್ನು ಪೋಸ್ಟ್ ಮಾಡಬಹುದು.

ಇದರ ಜೊತೆಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಕೂಡ ಸೇರಿಸಬಹುದು. ಈ ಹೊಸ ವೈಶಿಷ್ಟ್ಯವು Twitter ಟೈಮ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ನೀವು ಮಾಡುವ ಈ ದೀರ್ಘ ಟ್ವೀಟ್ ಪೂರ್ವವೀಕ್ಷಣೆಯನ್ನು ಸಹ ನೀವು ಪರಿಶೀಲಿಸಬಹುದು. ಟ್ವಿಟರ್ ಈಗಾಗಲೇ ಯುಎಸ್, ಯುಕೆ, ಕೆನಡಾ ಮತ್ತು ಘಾನಾದಲ್ಲಿ ಪ್ರಾಯೋಗಿಕ ಹಂತದಲ್ಲಿದ್ದು, ಯಶಸ್ವಿಯಾದ ಬಳಿಕ ಸಾರ್ವಜನಿಕರಿಗೆ ಪರಿಚಯಿಸಲಾಗುವುದು.

ಈ ಟಿಪ್ಪಣಿಯನ್ನು ಹಂಚಿಕೊಳ್ಳಲು ಬಯಸುವವರಿಗೆ ಪ್ರತ್ಯೇಕವಾಗಿ ಲಿಂಕ್ ಅನ್ನು ಸಹ ಲಭ್ಯಗೊಳಿಸಲಾಗುತ್ತಿದೆ. 2017 ರ ಮೊದಲು, Twitter ನಲ್ಲಿ ಅಕ್ಷರಗಳ ಮಿತಿ 140 ಆಗಿತ್ತು. ನಂತರ ಮಿತಿಯನ್ನು 280 ಕ್ಕೆ ಹೆಚ್ಚಿಸಲಾಯಿತು.‌

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!