Wednesday, June 7, 2023

Latest Posts

ಬಾರ್‌ನಲ್ಲಿ ರಾಮಾಯಣದ ಡಬ್ಬಿಂಗ್‌ ವಿಡಿಯೋ ಪ್ಲೇ : ಇಬ್ಬರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಾರ್‌ ವೊಂದರಲ್ಲಿ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣದ ದೃಶ್ಯಗಳನ್ನು ಡಬ್‌ ಮಾಡಿ ದೊಡ್ಡ ಪರದೆ ಮೇಲೆ ಪ್ಲೇ ಮಾಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಜೊತೆಗೆ ಅನೇಕ ಚರ್ಚೆಗಳಿಗೂ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ರೆಸ್ಟ್ರೋ-ಬಾರ್‌ನ ಸಹ-ಮಾಲೀಕ ಮತ್ತು ಅದರ ವ್ಯವಸ್ಥಾಪಕರನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರೇ ಸ್ವತಃ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ನೋಯ್ಡಾದ ʼಲಾರ್ಡ್ ಆಫ್ ದಿ ಡ್ರಿಂಕ್ಸ್ ರೆಸ್ಟೊ-ಬಾರ್ʼ ನಲ್ಲಿ ಈ ಘಟನೆ ನಡೆದಿದ್ದು, ದೊಡ್ಡ ಸ್ಕ್ರೀನ್‌ ನಲ್ಲಿ ರಾಮ ಹಾಗೂ ರಾವಣದ ಪಾತ್ರಗಳ ದೃಶ್ಯವನ್ನು ಪ್ಲೇ ಮಾಡಲಾಗಿದೆ. ಇಬ್ಬರ ನಡುವಿನ ಸಂಭಾಷಣೆಗೆ ಆಧುನಿಕ ಮ್ಯೂಸಿಕ್‌ ಗಳನ್ನು (ಡಿಜೆ) ಹಾಕಿ ದೃಶ್ಯವನ್ನು ಡಬ್‌ ಮಾಡಿ ಪ್ರಸಾರ ಮಾಡಲಾಗಿದೆ. ಇದನ್ನು ನೋಡಿದ ಬಾರ್‌ ನಲ್ಲಿದ್ದ ಜನರು ಡ್ಯಾನ್ಸ್‌ ಕೂಡ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ. ಇದು ರಾಮಾಯಣಕ್ಕೆ ಮಾಡಿದ ಅವಮಾನವೆಂದು ಹಲವರು ಹೇಳಿದ್ದಾರೆ. ಬಾರ್‌ ಅನ್ನು ಧ್ವಂಸಗೊಳಿಸುತ್ತೇವೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಈ ಆರೋಪಿಗಳ ಮೇಲೆ ಕ್ರಮ ತೆಗೆದಕೊಳ್ಳಬೇಕು, ಇಲ್ಲದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತದೆ ಎಂದಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿ, ರೆಸ್ಟ್ರೋ ಬಾರ್‌ನ ಸಹ ಮಾಲೀಕರು, ಅದರ ಮ್ಯಾನೇಜರ್ ಮತ್ತು ವೀಡಿಯೊವನ್ನು ಪ್ಲೇ ಮಾಡಿದ ಡಿಜೆ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ-ಮಾಲೀಕ ಮನಕ್ ಅಗರ್ವಾಲ್ ಮತ್ತು ಮ್ಯಾನೇಜರ್ ಅಭಿಷೇಕ್ ಸೋನಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!