October 15, 2026
Thursday, October 15, 2026
spot_img

ಬೇಸಿಗೆಯ ತಾಪಮಾನ ತಾಳಲಾರದೇ ಮೈಸೂರಿನಲ್ಲಿ ಎರಡು ಶ್ವಾನಗಳ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೇಸಿಗೆಯ ತಾಪ ತಾಳಲಾರದ ಜನ ತಮಗೆ ಬೇಕಾದ ರೀತಿಯಲ್ಲಿ ಬಿಸಿಲಿನಿಂದ ತಪ್ಪಿಸಿಕೊಳ್ತಿದ್ದಾರೆ. ಆದರೆ ಮೂಕಪ್ರಾಣಿಗಳಿಗೆ ಈ ಅವಕಾಶ ಇಲ್ಲ! ಮೈಸೂರಿನಲ್ಲಿ ಬಿಸಿಲಿನ ತಾಪಕ್ಕೆ ಬೆಂದು ಎರಡು ಶ್ವಾನಗಳು ಮೃತಪಟ್ಟಿವೆ.

ಗೋಲ್ಡನ್‌ ರಿಟ್ರೀವರ್‌ ವರ್ಗಕ್ಕೆ ಸೇರಿದ ಏಳು ವರ್ಷದ ರೋನಿ ಹಾಗೂ ಬಿಗಲ್‌ ವರ್ಗಕ್ಕೆ ಸೇರಿದ ನಾಲ್ಕು ವರ್ಷದ ಸೋನು ಎಂಬ ಸಾಕು ನಾಯಿ ಮೃತಪಟ್ಟಿವೆ. ಮತ್ತೊಂದು ಸಾಕು ನಾಯಿಯು ಬಿಸಿಲಿನ ಹೊಡೆತಕ್ಕೆ ಅಸ್ವಸ್ಥವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನಲ್ಲಿ ರೋನಿ ಎಂಬ ನಾಯಿ ಸೋಮಾನಿ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿತ್ತು. ಅದಾ ನಂತರ ಇದ್ದಕ್ಕಿದ್ದಂತೆಯೇ ಅಸ್ವಸ್ಥವಾಗಿತ್ತು. ನಂತರ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾದ ನಂತರ ಚಿಕಿತ್ಸೆ ಫಲಕಾರಿಯಾಗದೇ ರೋನಿ ಮೃತಪಟ್ಟಿದೆ.

ನಾಯಿಗಳು ಮನುಷ್ಯರಂತೆ ಬೆರವರೋದಿಲ್ಲ. ಉಸಿರಾಟದ ಮೂಲಕ ಮಾತ್ರ ತಾಪಮಾನವನ್ನು ಕಡಿಮೆ ಮಾಡೋದಕ್ಕೆ ಸಾಧ್ಯ. ಇದರಿಂದಾಗಿಯೂ ಸಮಸ್ಯೆ ಎದುರಾಗುತ್ತದೆ.

Must Read