ಮದುವೆ ಮನೆ ರಕ್ತಸಿಕ್ತ: ಪರಸ್ಪರ ಬಡಿದಾಡಿದ ಎರಡು ಕುಟುಂಬಸ್ಥರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆ ಸಂಭ್ರಮದ ವೇಳೆ ಎರಡು ಕುಟುಂಬಗಳ ನಡುವೆ ಮಾರಾಮಾರಿನಡೆದಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ  ನಡೆದಿದೆ. ಪರಸ್ಪರ ಇಟ್ಟಿಗೆ, ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘರ್ಷಣೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕೊತ್ವಾಲಿ ಬಡೋಸರೈ ಪ್ರದೇಶದ ಹಸನ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಸನಪುರ ನಿವಾಸಿಗಳಾದ ಜಲೀಲ್ ಮತ್ತು ಹನೀಫ್ ಎಂಬ ಇಬ್ಬರು ಹೆಣ್ಣುಮಕ್ಕಳ ವಿವಾಹದ ಮೆರವಣಿಗೆ ವೇಳೆ ಡಿಜೆಗೆ ಕುಣಿದು ಕುಪ್ಪಳಿಸುತ್ತಿದ್ದರು. ಇತ್ತ ಮತ್ತೊಂದು ಮದುವೆ ಮೆರವಣಿಗೆ ಹೋಗುತ್ತಿತ್ತು. ಎರಡೂ ಕಡೆಯವರ ಡಿಜೆಗೆ ನೃತ್ಯ ಮಾಡುವ ವಿಚಾರಕ್ಕೆ ವಾಗ್ವಾದ ನಡೆಯಿತು. ವಾಗ್ವಾದ ಸ್ವಲ್ಪ ಜೋರಾಗಿ ಎರಡು ಗುಂಪುಗಳ ನಡುವೆ ಭಾರೀ ಕಲ್ಲು ತೂರಾಟ ನಡೆದಿದ್ದು, ಪರಸ್ಪರ ದೊಣ್ಣೆಯಿಂದ ಹೊಡೆದಿದ್ದಾರೆ. ಈ ಘರ್ಷಣೆಯಲ್ಲಿ ಅಬ್ದುಲ್ ಸಲಾಂ, ಸಿರಾಜ್ ಅಹಮದ್, ರಂಜಾನ್, ರೆಹಾನ್, ಅಲೀಂ, ಅಜೀಂ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಮಿಶ್ರಾ ಮಾತನಾಡಿ, ಎರಡು ಬಣಗಳು ಪ್ರತ್ಯೇಕವಾಗಿ ಹೋಗುತ್ತಿವೆ. ಡಿಜೆಯಲ್ಲಿ ಡ್ಯಾನ್ಸ್ ಮಾಡುವ ವಿಚಾರದಲ್ಲಿ ಜಗಳವಾಯಿತು. ಇದಾದ ಬಳಿಕ ಎರಡೂ ಕಡೆಯವರು ತೀವ್ರವಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭ ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!