ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ಭಾರತದ ಗಡಿ ರಾಜ್ಯವಾದ ನಾಗಲ್ಯಾಂಡ್ ನಲ್ಲಿ 3 ಕೋಟಿ ಮೌಲ್ಯದ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.
ನಾಗಾಲ್ಯಾಂಡ್ನ ಕೊಹಿಮಾ ಜಿಲ್ಲೆಯ ಪೆಡುಚಾ ಚೆಕ್ ಪೋಸ್ಟ್ ಬಳಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಇಬ್ಬರು ಸಿಕ್ಕಿಬಿದ್ದಿದ್ದು ಬಂಧಿತರಿಂದ 49 ಪ್ಯಾಕೆಟ್ ಗಳಲ್ಲಿದ್ದ 615 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಕಾರೊಂದರಲ್ಲಿ 49 ಪ್ಯಾಕೆಟ್ ಸಾಗಿಸುತ್ತಿದ್ದ ಇವರನ್ನು ತಪಾಸಣೆ ವೇಳೆ ನಾಗಲ್ಯಾಂಡ್ ಪೋಲೀಸರು ಬಂಧಿಸಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.