ಇಬ್ಬರು ಮನೆ ಕಳ್ಳರ ಬಂಧನ: 18 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಕಾರು ವಶ

ಹೊಸದಿಗಂತ ಮೈಸೂರು;

ಇಲ್ಲಿನ ಸರಸ್ವತಿಪುರಂ ಠಾಣೆಯ ಪೊಲೀಸರು ಇಬ್ಬರು ಮನೆ ಕಳ್ಳರನ್ನು ಬಂಧಿಸಿ, ಅವರಿಂದ ಒಟ್ಟು ಮೌಲ್ಯ 18,09,200 ರೂ 240 ಗ್ರಾಂ ಚಿನ್ನಾಭರಣ, 1ಕೆ.ಜಿ. 146ಗ್ರಾಂ ಬೆಳ್ಳಿ ಪದಾರ್ಥಗಳು
ಹಾಗೂ 1 ಮಾರುತಿ ಕಾರು ವಶಪಡಿಸಿಕೊಂಡಿದ್ದಾರೆ.

ನಗರ ಸರಸ್ವತಿಪುರಂ ಠಾಣೆಯ ಪೊಲೀಸರು ಒಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಮನೆಗಳ ಕಳ್ಳತನದ ವಿಷಯ ಬಾಯಿ ಬಿಟ್ಟಿದ್ದಾನೆ. ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯ ಕನ್ನ ಕಳುವು ಪ್ರಕರಣ ಮತ್ತು ಚಿಂತಾಮಣಿ ಟೌನ್ ಪೊಲೀಸ್ ಠಾಣೆಯ ವಾಹನ ಕಳುವು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು 18,09,200 ರೂ ಮೌಲ್ಯದ 240 ಗ್ರಾಂ ಚಿನ್ನಾಭರಣ ಮತ್ತು 1ಕೆ.ಜಿ 146 ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ ಮಾರುತಿ-800 ಕಾರನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪತ್ತೆ ಕಾರ್ಯವನ್ನು ಮೈಸೂರಿನ ವಿಜಯನಗರ ವಿಭಾಗದ ಎಸಿಪಿರವರಾದ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ಸರಸ್ವತಿಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪುರುಷೋತ್ತಮ್ ಜಿ, ಪಿಎಸ್‌ಐ
ಮಹೇಂದ್ರ ಟಿ ಎಸ್, ಮತ್ತು ಲತಾ ಎಸ್ ಎಸ್ ಹಾಗೂ ಸಿಬ್ಬಂದಿಗಳಾದ ಎಎಸ್‌ಐ ನಾಗರಾಜು,
ಶೇಷಾದ್ರಿ, ಬಸವರಾಜೇಅರಸ್, ಮೋಹನ್‌ಕುಮಾರ್, ಕುಮಾರ್, ಸುದೀಪ್‌ಕುಮಾರ್, ರಕ್ಷಿತ್‌ಕುಮಾರ್,
ಚಂದ್ರಶೇಖರ್ ಹಾಗೂ ತಾಂತ್ರಿಕ ವಿಭಾಗದ ಕುಮಾರ್ ಕೈಗೊಂಡಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!