ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಾಸಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಐತಿಹಾಸಿಕ ವಿಶ್ವನಾಥನ ದೇಗುಲದ ಬಳಿ ಇರುವ ಎರಡು ಮನೆಗಳು ಕುಸಿದು ಬಿದ್ದಿವೆ.
ಮನೆ ಕುಸಿತದಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೂ ಎಂಟು ಮಂದಿ ಅವಶೇಷಗಳಡಿ ಇರುವ ಆತಂಕ ಎದುರಾಗಿದೆ. ನಗರದಲ್ಲಿ ಭಾರೀ ಮಳೆಯಿಂದಾಗಿ ಮನೆಗಳು ಕುಸಿದಿವೆ ಎಂದು ಉನ್ನತ ಪೊಲೀಸ್ ಅಧಿಕಾರಿ ಕೌಶಲ್ ಶರ್ಮಾ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ , ವೈದ್ಯರು ಮತ್ತು ಶ್ವಾನ ದಳದ ತಂಡವು ಸ್ಥಳದಲ್ಲಿವೆ.ಈ ಮನೆಗಳು ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲಿವೆ.
70 ವರ್ಷದ ಹಳೆಯ ಮನೆಗಳು ಏಕಾಏಕಿ ಕುಸಿದು ಬಿದ್ದಿವೆ, ಪ್ರಸಿದ್ಧ ಜವಾಹಿರ್ ಸಾವೋ ಕಚೋರಿ ವಾಲಾ ಮೇಲಿರುವ ರಾಜೇಶ್ ಗುಪ್ತಾ ಮತ್ತು ಮನೀಶ್ ಗುಪ್ತಾ ಅವರ ಮನೆಗಳ ಅವಶೇಷಗಳ ಅಡಿಯಲ್ಲಿ ಎಂಟು ಜನರು ಸಿಲುಕಿದ್ದಾರೆ ಎಂದು ಹೇಳಲಾಗಿದೆ.