ಸಂಸತ್ತಿನಲ್ಲಿ ಅಶಿಸ್ತು ತೋರಿದ ಮತ್ತೆ ಇಬ್ಬರು ಸಂಸದರ ಅಮಾನತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸತ್ತಿನಲ್ಲಿ (Parliament) ಅಶಿಸ್ತು ತೋರಿದ ಮತ್ತೆ ಇಬ್ಬರು ಸಂಸದರನ್ನು ಅಮಾನತು ಮಾಡಲಾಗಿದೆ.

ಕೇರಳ ಕಾಂಗ್ರೆಸ್ (ಎಂ) ಥಾಮಸ್ ಚಾಜಿಕಾಡನ್ (Thomas Chazhikadan) ಮತ್ತು ಸಿಪಿಎಂ (CPM) ಪಕ್ಷದ ಎಎಮ್ ಆರಿಫ್ (AM Ariff) ಅಮಾನತಾದ ಸಂಸದರು. ಪ್ಲೇಕಾರ್ಡ್‍ಗಳನ್ನು ಪ್ರದರ್ಶಿಸಿದ ಮತ್ತು ಸದನದ ಬಾವಿಗೆ ಪ್ರವೇಶಿಸಿದ್ದಕ್ಕಾಗಿ ಈ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.

ಚಳಿಗಾಲದ ಅಧಿವೇಶನ (Winter Session) ಶುಕ್ರವಾರ (ಡಿಸೆಂಬರ್ 22)ದಂದು ಕೊನೆಗೊಳ್ಳಲಿದೆ. ಇಲ್ಲಿಯವರೆಗೆ ಒಟ್ಟು 143 ಮಂದಿ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಲಾಗಿದೆ. ಡಿಸೆಂಬರ್ 4 ರಂದು ಆರಂಭವಾದ ಅಧಿವೇಶನದಲ್ಲಿ ಡಿಸೆಂಬರ್ 14 ರಂದು 14 ಸಂಸದರು, ಸೋಮವಾರ 78, ಮಂಗಳವಾರ 49 ಮತ್ತು ಇಂದು ಇನ್ನೂ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!