ಹೊಸದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಗೆ ರೈಲ್ವೆ ಇಲಾಖೆಯಿಂದ ಮತ್ತೆ ಎರಡು ಸೇತುವೆಗಳು ಘೋಷಣೆ ಆಗಿವೆ. ಇವುಗಳನ್ನು ಮಂಜೂರು ಮಾಡಿಸುವಲ್ಲಿ ಸಂಸದ ರಾಘವೇಂದ್ರ ಯಶಸ್ವಿಯಾಗಿದ್ದಾರೆ.
ಕೇಂದ್ರ ರೈಲ್ವೆ ಪ್ರಾಧಿಕಾರವು ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಎಲ್.ಸಿ. ಗೇಟ್ ನಂಬರ್ 47ರಲ್ಲಿ 6 ಕೋಟಿ ಮೊತ್ತದ ನೂತನ ಅಂಡರ್ ಪಾಸ್ ನಿರ್ಮಾಣ ಮಾಡಲು ಹಾಗೂ ಶಿವಮೊಗ್ಗ ತಾಲ್ಲೂಕು ಸಾಗರದ ಸೊರಬ ರಸ್ತೆಯ ಎಲ್.ಸಿ. ಗೇಟ್ ನಂಬರ್ 130ರಲ್ಲಿ 25 ಕೋಟಿ ಮೊತ್ತದ ನೂತನ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನ ಹಂಚಿಕೆ ಮಾಡಿ ಆದೇಶಿಸಿದೆ.
ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧತೆ ನಡೆದಿದೆ. ಇದಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಸಂಸದ ಬಿ.ವೈ ರಾಘವೇಂದ್ರ ಅಭಿನಂದಿಸಿದ್ದಾರೆ.