INDIA ಮೈತ್ರಿಕೂಟಕ್ಕೆ ಸಾಥ್ ಕೊಟ್ಟ ಮತ್ತೆರೆಡು ಪ್ರಾದೇಶಿಕ ಪಕ್ಷಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:
 
ಮುಂಬೈನಲ್ಲಿ ನಡೆಯುತ್ತಿರುವ INDIA ಮೈತ್ರಿಕೂಟದ ಸಭೆಗೆ ಮತ್ತೆ ಎರಡು ಪ್ರಾದೇಶಿಕ ಪಕ್ಷಗಳು ಸೇರಿವೆ.

ಇದರೊಂದಿಗೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಭಾರತೀಯ ರೈತರು ಮತ್ತು ಕಾರ್ಮಿಕರ ಪಕ್ಷ(PWP), ಮಹಾರಾಷ್ಟ್ರದ ಮಾರ್ಕ್ಸ್ವಾದಿ ರಾಜಕೀಯ ಪಕ್ಷ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟ ಸೇರಿವೆ.

28 ರಾಜಕೀಯ ಪಕ್ಷಗಳ 63 ಪ್ರತಿನಿಧಿಗಳು INDIA ಸಭೆಯಲ್ಲಿ ಭಾಗವಹಿಸಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಎದುರಿಸಲು ತಮ್ಮ ಸಾಮಾನ್ಯ ಪ್ರಚಾರ ಕಾರ್ಯತಂತ್ರವನ್ನು ರೂಪಿಸಲು ಪಾಟ್ನಾ ಮತ್ತು ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಪ್ರತಿಪಕ್ಷಗಳು ಈಗ ಮೂರನೇ ಸುತ್ತಿನ ಚಿಂತನ-ಮಂಥನ ಸಭೆಯನ್ನು ಮುಂಬೈನಲ್ಲಿ ನಡೆಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!