Saturday, April 1, 2023

Latest Posts

ಗೋವುಗಳ ಅಕ್ರಮ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ರಾಜಸ್ಥಾನದಿಂದ ಅಪಹರಿಸಿ ಹರಿಯಾಣದಲ್ಲಿ ಬೆಂಕಿ ಹಚ್ಚಿ ಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹರಿಯಾಣದಲ್ಲಿ ಗೋವುಗಳ ಅಕ್ರಮ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಜೀವಂತವಾಗಿ (Cow Smugglers) ಸುಟ್ಟು, ಹತ್ಯೆಗೈಯಲಾಗಿದೆ.
ಗೋವುಗಳ ಅಕ್ರಮ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನದ ಭರತ್‌ಪುರ ಜಿಲ್ಲೆ ಗೋಪಾಲಗಢದಿಂದ ಇಬ್ಬರನ್ನು ಅಪಹರಣ ಮಾಡಲಾಗಿದೆ. ಇಬ್ಬರನ್ನೂ ಹರಿಯಾಣದ ಲುಹಾರು ಜಿಲ್ಲೆಗೆ ಕರೆದುಕೊಂಡು ಬಂದು, ವಾಹನ ಸಮೇತ ಇಬ್ಬರನ್ನು ಸಜೀವವಾಗಿ ದಹನಗೊಳಿಸಲಾಗಿದೆ.
ಭರತ್‌ಪುರ ಐಜಿ ಗೌರವ್‌ ಶ್ರೀವಾತ್ಸವ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, ಸುಟ್ಟು ಕರಕಲಾದ ವಾಹನವೊಂದು ಪತ್ತೆಯಾಗಿದ್ದು, ಅದರಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಇಬ್ಬರೂ ಗೋವುಗಳನ್ನು ಸಾಗಣೆ ಮಾಡುವವರಾಗಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!