ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವು ತಿಂಗಳ ಹಿಂದೆ ಆರಂಭಿಸಲಾದ ವಂದೇ ಭಾರತ್ ರೈಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ವಂದೇ ಭಾರತ್ ರೈಲುಗಳನ್ನು ಬಳಸುತ್ತಾರೆ. ಈ ಮಧ್ಯೆ, ವಂದೇ ಭಾರತ್ ರೈಲಿನಲ್ಲಿ ಲಗೇಜ್ ಶೇಖರಣಾ ಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಭುಗಿಲೆದ್ದಿದೆ.
ಕೆಲವು ದಿನಗಳ ಹಿಂದೆ, ಚಲಿಸುವ ರೈಲು, ಮೆಟ್ರೋದಲ್ಲಿ ಡ್ಯಾನ್ಸ್ ಮಾಡುವ ವಿಡಿಯೊ ವೈರಲ್ ಆಗಿತ್ತು. ರೈಲಿನಲ್ಲಿ ನಡೆದ ಹೊಡೆದಾಟದ ದೃಶ್ಯ ಇದೀಗ ಸಂಚಲನ ಮೂಡಿಸುತ್ತಿದೆ. ಇದೇ ದೃಶ್ಯ ವಂದೇ ಭಾರತ್ ರೈಲಿನಲ್ಲಿ ಕಂಡುಬಂದಿದೆ. ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಜಗಳವಾಡುತ್ತಿರುವುದನ್ನು ಕಾಣಬಹುದಾಗಿದೆ. ಅವರ ನಡುವೆ ಲಗೇಜ್ ಜಾಗದ ವಿಚಾರವಾಗಿ ಜಗಳವಾಗಿದೆ ಎನ್ನಲಾಗಿದೆ.
ಇಬ್ಬರು ವ್ಯಕ್ತಿಗಳು ಸ್ಥಳದ ಕೊರತೆ ಮತ್ತು ಲಗೇಜ್ ಸ್ಥಳದ ಬಗ್ಗೆ ಪರಸ್ಪರ ವಾದಿಸತೊಡಗಿದರು. ಜತೆಗೆ ಮಹಿಳೆಯೂ ಸೇರಿಕೊಂಡರು. ಅವರು ಕೂಡ ಕೂಗಾಡಿದರು. ಕೆಲವು ಸಹ ಪ್ರಯಾಣಿಕರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ನಂತರ, ರೈಲ್ವೆ ಪೊಲೀಸ್ ಅಧಿಕಾರಿ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿರುವುದು ಈ ವೀಡಿಯೊದಲ್ಲಿ ಸೆರೆಯಾಗಿದೆ. “ವಂದೇ ಭಾರತ್ ರೈಲಿನಲ್ಲಿ ಇಬ್ಬರು ಅಂಕಲ್‌ಗಳು ಬ್ಯಾಗ್ ಜಾಗಕ್ಕಾಗಿ ಜಗಳವಾಡುತ್ತಿದ್ದಾರೆ”. ಎಂದು ಉಪಶೀರ್ಷಿಕೆ ನೀಡಲಾಗಿದೆ.