VIDEO | ಪೋರ್ಚುಗಲ್ ಏರ್‌ ಶೋ ವೇಳೆ ಎರಡು ವಿಮಾನ ಡಿಕ್ಕಿ: ಪೈಲಟ್‌ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದಕ್ಷಿಣ ಪೋರ್ಚುಗಲ್‌ನಲ್ಲಿ ನಡೆದ ಏರ್ ಶೋ ಪ್ರದರ್ಶನದ ವೇಳೆ ಎರಡು ಸಣ್ಣ ವಿಮಾನಗಳು ಡಿಕ್ಕಿ ಹೊಡೆದು ಓರ್ವ ಪೈಲಟ್ ಮೃತಪಟ್ಟಿದ್ದಾರೆ.

ಆರು ವಿಮಾನಗಳನ್ನು ಒಳಗೊಂಡ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಎರಡು ವಿಮಾನಗಳು ಅಪಘಾತಕ್ಕೆ ಒಳಗಾದವು. ಪೋರ್ಚುಗಲ್ ನಲ್ಲಿ ನಡೆದ ಬೇಜಾ ಏರ್ ಶೋ ವೇಳೆ ಅಪಘಾತ ಸಂಭವಿಸಿದೆ.ಏರ್‌ ಶೋ ನೋಡಲು ಉತ್ಸುಕರಾಗಿ ಕುಳಿತಿದ್ದ ಜನ ಒಂದೇ ಕ್ಷಣಕ್ಕೆ ಭಯಭೀತರಾಗಿದ್ದಾರೆ.

ಅಪಘಾತದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಒಂದು ವಿಮಾನದ ಪೈಲಟ್‌ ಮೃತಪಟ್ಟಿದ್ದು, ಮತ್ತೊಂದು ವಿಮಾನದ ಪೈಲಟ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!