ಹೊಸದಿಗಂತ ವರದಿ ಪಾಂಡವಪುರ:
ಕೆರೆಯಲ್ಲಿ ಈಜಾಡಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆರೆತೊಣ್ಣೂರಿನ ಹಿನ್ನೀರಿನಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಹುಲ್ಕೇರೆ ಕೊಪ್ಪಲು (ದಾಸೇಗೌಡನಕೊಪ್ಪಲು) ಗ್ರಾಮದ ನಿವಾಸಿ ಸ್ವಾಮಿಗೌಡ ಅವರ ಪುತ್ರ ಯಶವಂತ್ (18) ಹಾಗೂ ಕೆ.ಆರ್.ಪೇಟೆ ತಾಲೂಕಿನ ಎಂ.ಹೊಸೂರು ಗ್ರಾಮದ ಕೃಷ್ಣೇಗೌಡ ಅವರ ಪುತ್ರ ರಾಜು (18) ಎಂಬುವವರು ಮೃತಪಟ್ಟವರು. ಈ ಇಬ್ಬರು ಚಿನಕುರಳಿ ಎಸ್ ಟಿಜಿ ಕಾಲೇಜಿನ ಪದವಿ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು.
ಘಟನೆ ವಿವರ:
ಬುಧವಾರ ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಚಕ್ಕರ್ ಹೊಡೆದು ತಾಲೂಕಿನ ಕೆರೆತೊಣ್ಣೂರು ಹಿನ್ನೀರಿನ ಬಳಿ ಈಜಾಡಲು ಹೋಗಿದ್ದಾಗ ಈ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:
ʼಬಳಿಕ ಇಬ್ಬರು ವಿದ್ಯಾರ್ಥಿಗಳ ಶವಗಳು ದೊರಕಿದ್ದು, ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆ ಶವಾಗಾರದ ಮುಂದೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟುವಂತಿತ್ತು.



