ಜಮ್ಮುವಿನಲ್ಲಿ ಭದ್ರತಾ ಪಡೆಗಳ ಪ್ರತ್ಯೇಕ ಕಾರ್ಯಾಚರಣೆ: ಇಬ್ಬರು ಭಯೋತ್ಪಾದಕ ಸಹಚರರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದ ಪುಲ್ವಾಮಾ ಮತ್ತು ಶ್ರೀನಗರದಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕ ಸಹಚರರನ್ನು ಭದ್ರತಾ ಪಡೆ ಬಂಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ವಕ್ತಾರರು, ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕ ಸಹಚರರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಜೈಶ್ ಎ ಮೊಹಮ್ಮದ್ ನ ಭಯೋತ್ಪಾದಕ ಸಹಚರ ಇರ್ಫಾನ್ ಯೂಸುಫ್ ಧಾರ್ ನನ್ನು ಬಂಧಿಸಲಾಗಿದೆ.
ಈತನ ಬಳಿ ಇದ್ದ ಎಕೆ ರೈಫಲ್, ಮ್ಯಾಗಜೀನ್ ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈದ್ಗಾ ಪ್ರದೇಶದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆ ವೇಳೆ ಎಲ್ ಇಟಿ ಭಯೋತ್ಪಾದಕ ಸಹಚರನನ್ನು ಬಂಧಿಸಲಾಗಿದ್ದು, ಆತನ ಬಳಿ ಇದ್ದ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಈತನನ್ನು ಜುನೈದ್ ಮುಷ್ತಾಕ್ ಭಟ್ ಎಂದು ಗುರುತಿಸಲಾಗಿದೆ. ಈ ಇಬ್ಬರ ಕುರಿತು ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!