ಸನವಳ್ಳಿ ಜಲಾಶಯದ ಬಳಿ ಎರಡು ಕಾಡು ಕೋಣ ಪ್ರತ್ಯಕ್ಷ!

ಹೊಸದಿಗಂತ ವರದಿ ಮುಂಡಗೋಡ:

ತಾಲೂಕಿನ ಸನವಳ್ಳಿ ಜಲಾಶಯದ ಹತ್ತಿರವಿರುವ ಅರಣ್ಯದ ರಸ್ತೆ ಪಕ್ಕದಲ್ಲಿ ಎರಡು ಕಾಡು ಕೋಣಗಳು ಪ್ರತ್ಯಕ್ಷವಾಗಿದ್ದು, ಇವುಗಳನ್ನು ಕಂಡ ಬೈಕ್ ಸವಾರ ತನ್ನ ಪೋನ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಪಟ್ಟಣದ ಸುಭಾಷ್ ನಗರದ ಸುಭಾಷ್ ಬೋವಿ ಎಂಬುವವರು ಮುಂಡಗೋಡದಿಂದ ಸನವಳ್ಳಿ ಮಾರ್ಗವಾಗಿ ಶಿಗ್ಗಾಂವ ತಾಲೂಕಿಗೆ ತನ್ನ ಬೈಕ್ ಮೇಲೆ ತೆರಳುತ್ತಿದ್ದಾಗ ಏಕಾಏಕಿ ಎರಡು ಕಾಡು ಕೋಣಗಳು ರಸ್ತೆಯಲ್ಲಿ ಬಂದಿವೆ. ದೊಡ್ಡ ಗಾತ್ರದಲ್ಲಿ ಎರಡು ಕೋಣಗಳನ್ನು ಕಂಡ ಬೈಕ್ ಸವಾರ ಭಯದಿಂದ ಬೈಕ್ ತಿರುಗಿಸಿ ದೂರದಲ್ಲಿ ನಿಂತು ತಮ್ಮ ಪೋನ್ ಕ್ಯಾಮರಾದಲ್ಲಿ ಫೋಟೋ ತೆಗೆದಿದ್ದಾರೆ.

ಪಟ್ಟಣದ ಹತ್ತಿರದ ಅರಣ್ಯದಲ್ಲಿ ಕಾಡು ಕೋಣಗಳು ಕಂಡು ಬಂದಿದ್ದು ಇದೆ ಮೊದಲ ಬಾರಿ. ಕೋಣಗಳು ಬೃಹತ್ ಗಾತ್ರವಾಗಿದ್ದರಿಂದ ಭಯಗೊಂಡು ಶಿಗ್ಗಾಂವ ಹೋಗುವುದನ್ನು ಬಿಟ್ಟು ಮರಳಿ ಬಂದೆ ಎಂದು ಸುಭಾಷ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!