October 8, 2026
Thursday, October 8, 2026
spot_img

ಒಂದೇ ಪಂದ್ಯದಲ್ಲಿ ಎರಡು ಯೆಲ್ಲೋ ಕಾರ್ಡ್: ಸ್ವಿಟ್ಜರ್‌ಲ್ಯಾಂಡ್ ಸ್ಟಾರ್ ಆಟಗಾರನಿಗೆ ‘ರೆಡ್’ ಶಾಕ್ ನೀಡಿದ VAR

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾನ್ಸಾಸ್ ಸಿಟಿಯ ಆ್ಯರೋಹೆಡ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ರೋಮಾಂಚಕ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅರ್ಜೆಂಟೀನಾ ಮತ್ತು ಸ್ವಿಟ್ಜರ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದ 10ನೇ ನಿಮಿಷದಲ್ಲೇ ಲಿಯೋನೆಲ್ ಮೆಸ್ಸಿ ನೀಡಿದ ಅದ್ಭುತ ಕಾರ್ನರ್ ಪಾಸ್ ಅನ್ನು ಅಲೆಕ್ಸಿಸ್ ಮ್ಯಾಕ್ ಆಲಿಸ್ಟರ್ ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿ, ಅರ್ಜೆಂಟೀನಾಗೆ 1-0 ಮುನ್ನಡೆ ತಂದುಕೊಟ್ಟರು.

ಡಾನ್ ನ್ಡೋಯ್ ತಂದ ಸಮಬಲ

ದ್ವಿತೀಯಾರ್ಧದಲ್ಲಿ ತಿರುಗಿಬಿದ್ದ ಸ್ವಿಟ್ಜರ್‌ಲ್ಯಾಂಡ್ ಆಕ್ರಮಣಕಾರಿ ಆಟಕ್ಕೆ ಮೊರೆಹೋಯಿತು. ನುರಿತ ಆಟಗಾರ ಡಾನ್ ನ್ಡೋಯ್ ಆಕರ್ಷಕ ಗೋಲು ಬಾರಿಸುವ ಮೂಲಕ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿ ರೋಮಾಂಚನ ಮೂಡಿಸಿದರು.

VAR ಮ್ಯಾಜಿಕ್: ಎಂಬೊಲೊಗೆ ರೆಡ್ ಕಾರ್ಡ್ ಶಾಕ್!

ಪಂದ್ಯದ 72ನೇ ನಿಮಿಷದಲ್ಲಿ ನಾಟಕೀಯ ತಿರುವು ಎದುರಾಯಿತು. ಲಿಯಾಂಡ್ರೊ ಪರೇಡೆಸ್ ಅವರು ಸ್ವಿಟ್ಜರ್‌ಲ್ಯಾಂಡ್‌ನ ಫಾರ್ವರ್ಡ್ ಆಟಗಾರ ಬ್ರೀಲ್ ಎಂಬೊಲೊ ಅವರನ್ನು ಕೆಳಗೆ ಬೀಳಿಸಿದರು ಎಂದು ರೆಫರಿ ಜೋವಾವೊ ಪಿನ್ಹೈರೊ ಮೊದಲು ಪರೇಡೆಸ್‌ಗೆ ಯೆಲ್ಲೋ ಕಾರ್ಡ್ ನೀಡಿದ್ದರು. ಆದರೆ, ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಮರುಪರಿಶೀಲನೆ ನಡೆಸಿದಾಗ, ಎಂಬೊಲೊ ಸಂಪರ್ಕಕ್ಕೂ ಮುನ್ನವೇ ನಟಿಸಿ ಬಿದ್ದಿರುವುದು (ಡೈವಿಂಗ್) ಬಹಿರಂಗವಾಯಿತು.

ತಕ್ಷಣವೇ ರೆಫರಿ ಪರೇಡೆಸ್ ಅವರ ಯೆಲ್ಲೋ ಕಾರ್ಡ್ ರದ್ದುಗೊಳಿಸಿ, ಎಂಬೊಲೊಗೆ ಯೆಲ್ಲೋ ಕಾರ್ಡ್ ನೀಡಿದರು. 44ನೇ ನಿಮಿಷದಲ್ಲೇ ಈಗಾಗಲೇ ಒಂದು ಯೆಲ್ಲೋ ಕಾರ್ಡ್ ಪಡೆದಿದ್ದ ಎಂಬೊಲೊ, ಎರಡನೇ ಕಾರ್ಡ್ ಪಡೆಯುವ ಮೂಲಕ ರೆಡ್ ಕಾರ್ಡ್‌ಗೆ ಒಳಗಾಗಿ ಮೈದಾನದಿಂದ ಹೊರನಡೆದರು. ಈ ನಿರ್ಧಾರ ಈಗ ಜಾಗತಿಕ ಫುಟ್‌ಬಾಲ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Must Read