ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಾನದಿಯಲ್ಲಿ ಈಜಲು ಬಂದಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿಯ ಭೀಮನಕಟ್ಟೆ ಗ್ರಾಮದ ಬಳಿ ತುಂಗಾ ನದಿಯಲ್ಲಿ ಈಜಲು ಬಂದಿದ್ದ ಗೌತಮ್ ಹಾಗೂ ಸುಜಯ್ ಮೃತಪಟ್ಟಿದ್ದಾರೆ.
ತೀರ್ಥಹಳ್ಳಿ ಭಾಗಕ್ಕೆ ಗೌತಮ್ ಹಾಗೂ ಸುಜಯ್ ಟ್ರಿಪ್ ಮಾಡಲು ಬಂದಿದ್ದರು. ನಿನ್ನೆ ಸಂಜೆ ತುಂಗಾ ನದಿಯ ದಡದಲ್ಲಿ ತುಸು ಸಮಯ ಕಳೆದು ನೀರಿನಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ಮುಳುಗಿ ಮೃತಪಟ್ಟಿದ್ದಾರೆ.
ನದಿಯ ಭಾಗದಲ್ಲಿ ಬಟ್ಟೆಗಳು ಇದ್ದದ್ದನ್ನು ಕಂಡು ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈಗಾಗಲೇ ಗೌತಮ್ ಮೃತದೇಹ ಪತ್ತೆಯಾಗಿದ್ದು, ಸುಜಯ್ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.