ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯ ಹನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿಯ ಮಲಪ್ರಭಾ ನದಿಯಲ್ಲಿ ಇಬ್ಬರು ಯುವಕರು ಮುಳುಗಿದ್ದಾರೆ.
ಬಾಗಲಕೋಟೆಯ ಅಕ್ಷಯ್ ಕಂಠಿಮಠ, ಕಮತಗಿ ನಿವಾಸಿ ವಿಜಯ್ ಅರುಟಗಿಮಠ ಮೃತರು. ನಿನ್ನೆ ನದಿಯಲ್ಲಿ ಯುವಕರು ಈಜಲು ತೆರಳಿದ್ದು, ನಾಪತ್ತೆಯಾಗಿದ್ದರು.
ಎಷ್ಟು ಸಮಯವಾದರೂ ಮಕ್ಕಳು ಮನೆಗೆ ಬಾರದೇ ಇದ್ದ ಕಾರಣ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತದನಂತರ ಹನಗುಂದ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಅಮೀನಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.