ಗಾಜಾದಲ್ಲಿ ಅಮೆರಿಕನ್ ಒತ್ತೆಯಾಳುಗಳನ್ನು ರಕ್ಷಿಸಲು ಯುಎಸ್‌ ಸೀಕ್ರೆಟ್‌ ಆಪರೇಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೇಲ್-ಹಮಾಸ್ ಯುದ್ಧದ ಭಾಗವಾಗಿ ಗಾಜಾದಲ್ಲಿರುವ ತನ್ನ ಒತ್ತೆಯಾಳುಗಳನ್ನು ರಕ್ಷಿಸಲು ಅಮೆರಿಕ ರಹಸ್ಯ ಕಮಾಂಡೋ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿರುವುದಾಗಿ ಶ್ವೇತಭವನ ತಿಳಿಸಿದೆ.

ಅಮೆರಿಕದ ಶ್ವೇತಭವನದ ವಕ್ತಾರ ಜಾನ್ ಕಿರ್ಬಿ 11 ಅಮೆರಿಕನ್ನರನ್ನು ಹಮಾಸ್ ಉಗ್ರರು ಹತ್ಯೆ ಮಾಡಿದ್ದಾರೆಂದು ಖಚಿತಪಡಿಸಿದರು. “ವಾಷಿಂಗ್ಟನ್ ಇಸ್ರೇಲ್‌ನೊಂದಿಗೆ ಮಾತುಕತೆ ನಡೆಸಿ, ಅಮೆರಿಕದ ಒತ್ತೆಯಾಳುಗಳು ಎಲ್ಲಿದ್ದಾರೆ ಮತ್ತು ಅವರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಕಂಡುಹಿಡಿಯಲು ಕಾರ್ಯಾಚರಣೆ ನಡೆಸುತ್ತಿರುವುದಾಗಿ” ಅಮೆರಿಕದ ಮೂಲಗಳು ತಿಳಿಸಿವೆ.

ಇಸ್ರೇಲ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸದಂತೆ ಇರಾನ್‌ಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಕೆ ನೀಡಿದ್ದಾರೆ. ಯುದ್ಧವು ಆರನೇ ದಿನಕ್ಕೆ ಕಾಲಿಡುತ್ತಿದ್ದಂತೆ ಇಸ್ರೇಲಿ ಸೇನೆಯು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಅನ್ನು ಗುರಿಯಾಗಿರಿಸಿ ದಾಳಿ ಮುಂದುವರೆಸಿದೆ. ಈ ನಡುವೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಇಸ್ರೇಲ್ಗೆ ಆಗಮಿಸಲಿದ್ದಾರೆ. ಗಾಜಾದಲ್ಲಿ ರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 51 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿ, 281 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!