October 15, 2026
Thursday, October 15, 2026
spot_img

ಯುಎಇ ಬತ್ತಳಿಕೆಗೆ ‘ಐರನ್‌ ಬೀಮ್’ ಅಸ್ತ್ರ: ಇಸ್ರೇಲ್‌ ಸುಧಾರಿತ ರಕ್ಷಣಾ ವ್ಯವಸ್ಥೆ ಅರಬ್ ಎಮಿರೇಟ್ಸ್‌ ಕೈಯಲ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹೊತ್ತಿನಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಇಸ್ರೇಲ್ ಸುಧಾರಿತ ವಾಯು ರಕ್ಷಣಾ ತಂತ್ರಜ್ಞಾನ ಒದಗಿಸಿರುವುದಾಗಿ ವರದಿಯಾಗಿದೆ. ಡ್ರೋನ್‌ಗಳು ಮತ್ತು ಅಲ್ಪ ದೂರದ ಕ್ಷಿಪಣಿಗಳ ದಾಳಿಯನ್ನು ತಡೆಯಬಲ್ಲ ಅತ್ಯಾಧುನಿಕ ಲೇಸರ್ ಆಧಾರಿತ ಐರನ್‌ ಬೀಮ್ ಲೇಸರ್ ಆಯುಧವಾಗಿದ್ದು, ಇದು ಭದ್ರತಾ ಸಹಕಾರದ ಹೊಸ ಹಂತಕ್ಕೆ ದಾರಿ ಮಾಡಿಕೊಟ್ಟಿದೆ.

ಇರಾನ್ ಬೆಂಬಲಿತ ದಾಳಿಗಳ ಭೀತಿ ಹೆಚ್ಚಿದ ಹಿನ್ನೆಲೆಯಲ್ಲಿ, ಯುಎಇ ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವತ್ತ ಗಮನ ಹರಿಸಿದೆ. ಈ ಹಿನ್ನೆಲೆ ಇಸ್ರೇಲ್, ಕಣ್ಗಾವಲು ಹಾಗೂ ವಾಯುಭದ್ರತಾ ವ್ಯವಸ್ಥೆಗಳ ನೆರವು ನೀಡಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ:

ಡ್ರೋನ್‌ಗಳನ್ನು ಗುರಿಯಾಗಿಸಿಕೊಂಡು ಕ್ಷಿಪ್ರವಾಗಿ ನಾಶಪಡಿಸುವ ಸಾಮರ್ಥ್ಯ ಹೊಂದಿರುವ ಲೇಸರ್ ತಂತ್ರಜ್ಞಾನವು ಯುದ್ಧತಂತ್ರದಲ್ಲಿ ಮಹತ್ವದ ಬದಲಾವಣೆ ತರಬಲ್ಲದು ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.

ಕಡಿಮೆ ವೆಚ್ಚದಲ್ಲಿ ತ್ವರಿತ ಪ್ರತಿಕ್ರಿಯೆ ನೀಡುವ ಈ ವ್ಯವಸ್ಥೆ ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ನೆರವಾಗಲಿದೆ ಎನ್ನಲಾಗುತ್ತಿದೆ. ಇಸ್ರೇಲ್ ಮತ್ತು ಯುಎಇ ನಡುವಿನ ರಕ್ಷಣಾ ಸಹಕಾರದ ಈ ಬೆಳವಣಿಗೆ, ಪ್ರದೇಶದ ರಾಜಕೀಯ ಸಮೀಕರಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

Must Read