ಯುಎಇ ನನ್ನ ಮತ್ತೊಂದು ಮನೆಯ ರೀತಿ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಅರಬ್‌ ರಾಷ್ಟ್ರಕ್ಕೆ ಇಳಿದ ನಂತರ ಅವರು ಯುಎಇಯಲ್ಲಿರುವುದು ನನಗೆ ಮತ್ತೊಂದು ಮನೆಯಲ್ಲಿ ಇದ್ದಂತೆ ಅನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ‘ಅಹ್ಲಾನ್ ಮೋದಿ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮುನ್ನ ದ್ವಿಪಕ್ಷೀಯ ಸಭೆಯನ್ನು ನಡೆಸಿದರು.

ಯುಎಇಯ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವಾದ ಬಿಎಪಿಎಸ್ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. “ಬಾಪ್ಸ್ ದೇವಾಲಯವು ಭಾರತ ಮತ್ತು ಯುಎಇ ಎರಡೂ ಹಂಚಿಕೊಳ್ಳುವ ಸಾಮರಸ್ಯ, ಶಾಂತಿ ಮತ್ತು ಸಹಿಷ್ಣುತೆಯ ಮೌಲ್ಯಗಳಿಗೆ ನಿರಂತರ ಗೌರವವಾಗಿದೆ” ಎಂದು ಹೇಳಿದ್ದಾರೆ. 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದು ಪ್ರಧಾನ ಮಂತ್ರಿ ಅವರ 7ನೇ ಯುಎಇ ಪ್ರವಾಸ ಇದಾಗಿದೆ. ಯುಎಇ ಮುಗಿದ ಬಳಿಕ ಕತಾರ್‌ ದೇಶಕ್ಕೆ 2ನೇ ಬಾರಿಗೆ ಭೇಟಿ ನೀಡಲಿದ್ದಾರೆ.

ಯುಎಇಗೆ ಹೊರಡುವ ಮುನ್ನ ನೀಡಿದ ಹೇಳಿಕೆಯಲ್ಲಿ, ಯುಎಇಯೊಂದಿಗೆ ಭಾರತದ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಮುಂದುವರಿಸಲು ತಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದರು.ಕಳೆದ ಒಂಬತ್ತು ವರ್ಷಗಳಲ್ಲಿ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಶಿಕ್ಷಣದಂತಹ ವೈವಿಧ್ಯಮಯ ವಲಯಗಳಲ್ಲಿ ಯುಎಇಯೊಂದಿಗಿನ ನಮ್ಮ ಸಹಕಾರವು ಬಹುಪಟ್ಟು ಬೆಳೆದಿದೆ. ನಮ್ಮ ಸಾಂಸ್ಕೃತಿಕ ಮತ್ತು ಜನರಿಂದ ಜನರ ಸಂಪರ್ಕವು ಎಂದಿಗಿಂತಲೂ ಬಲವಾಗಿದೆ ಅವರು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!