ಕಚೇರಿಗೆ ಹೋಗುವ ಉದ್ಯೋಗಿಗಳಿಗೆ ಶೀಘ್ರದಲ್ಲೇ ಉಬರ್‌ ಬಸ್‌ ಸೇವೆ ಪ್ರಾರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊಲ್ಕತ್ತಾ ಉದ್ಯೋಗಿಗಳು ಇನ್ಮುಂದೆ ಕಚೇರಿಗೆ ತೆರಳಲು ಪರದಾಡಬೇಕಿಲ್ಲ. ಶೀಘ್ರದಲ್ಲೇ ಕೊಲ್ಕತ್ತಾ ನಗರದಲ್ಲಿ ಬಸ್‌ ಸೇವೆ ಆರಂಭಿಸುವುದಾಗಿ ಉಬರ್ ತಿಳಿಸಿದೆ.

ಮುಂದಿನ ವರ್ಷದ ಮಾರ್ಚ್ ವೇಳೆಗೆ, ಪೂರ್ವ-ನಿರ್ಧರಿತ ಮಾರ್ಗಗಳಲ್ಲಿ 60 ಹವಾನಿಯಂತ್ರಿತ ಬಸ್‌ಗಳನ್ನು ಓಡಿಸಲಿದ್ದು, ನಗರದ ವಸತಿ ಪ್ರದೇಶಗಳು ಹಾಗೂ ಕಚೇರಿ ಸ್ಥಳಗಳ ನಡುವೆ ಈ ಬಸ್‌ಗಳು ಸಂಚರಿಸಲಿವೆ.

2025ರ ವೇಳೆಗೆ ರಾಜ್ಯದಲ್ಲಿ 10 ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಗುರಿ ಹೊಂದಿದ್ದು, ಮುಂದಿನ ಐದು ವರ್ಷಗಳಲ್ಲಿ ಸುಮಾರು 50,000 ಉದ್ಯೋಗವಕಾಶಗಳನ್ನು ಸೃಷ್ಟಿಸುವ ಭರವಸೆಯಿದೆ. ಈ ಸೇವೆಗಾಗಿ ಉಬರ್ ಪಶ್ಚಿಮ ಬಂಗಾಳದ ಜಾಗತಿಕ ವ್ಯಾಪಾರ ಶೃಂಗಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಕ್ಯಾಬ್‌ಗಳಂತೆ, ಪ್ರಯಾಣಿಕರು ಒಂದು ವಾರ ಮುಂಚಿತವಾಗಿ ಸೀಟ್‌ಗಳನ್ನು ಮುಂಗಡ ಕಾಯ್ದಿರಿಸುವ ಸೌಲಭ್ಯವಿದೆ. ಲೈವ್ ಸ್ಥಳ ಮತ್ತು ಮಾರ್ಗವನ್ನು ಸಹ ಟ್ರ್ಯಾಕ್ ಮಾಡಬಹುದು. ಜೊತೆಗೆ ಉಬರ್ ಅಪ್ಲಿಕೇಶನ್ ಮೂಲಕ ಸಮಯವನ್ನು ಅಂದಾಜು ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಉಬರ್‌ ಬಸ್‌ ಸೇವೆ ಲಭ್ಯವಿರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!