ಉದಯಪುರ ಹಿಂದು ಹತ್ಯೆಗೆ ಕಾರಣವಾಗಿದ್ದ ಆರೋಪಿಗಳಿಗೆ ಐಸಿಸ್‌ ನಂಟು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉದಯಪುರ ಹಿಂದು ಟೈಲರ್ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಅಲ್ಲದೇ ಮಾರ್ಚ್‌ 30 ರಂದು ಜೈಪುರದಲ್ಲಿ ನಡೆದ ಸರಣಿ ಸ್ಫೋಟಗಳ ಭಾಗವಾಗಿದ್ದರು ಎನ್ನಲಾಗಿದೆ. ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿ ಮೂಲಕ, ಅವರು ISIS ನ ರಿಮೋಟ್ ಸ್ಲೀಪರ್ ಸಂಘಟನೆಯಾದ ಅಲ್-ಸುಫಾದೊಂದಿಗೆ ಸಂಬಂಧ ಹೊಂದಿದ್ದರು. ಇಬ್ಬರು ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ರಿಯಾಜ್ “ಅಟ್ಟಾರಿ” ಉದಯಪುರದ ಅಲ್-ಸುಫಾ ಮುಖ್ಯಸ್ಥನಾಗಿದ್ದ. ಈತ ಈ ಹಿಂದೆ ಟೋಂಕ್‌ನಿಂದ ಬಂಧನಕ್ಕೊಳಗಾಗಿದ್ದ ಐಸಿಸ್ ಭಯೋತ್ಪಾದಕ ಮುಜೀಬ್ ಜತೆಗೂ ಸಂಬಂಧ ಹೊಂದಿದ್ದ ಎನ್ನಲಾಗಿದೆ.

ರಿಯಾಜ್ ಅಟ್ಟಾರಿ ಉದಯಪುರದ ಅಲ್-ಸುಫಾ ಮುಖ್ಯಸ್ಥನಾಗಿದ್ದ, ಐದು ವರ್ಷಗಳಿಂದ ಉದಯಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದ. ಆತ ಎರಡನೇ ಭಯೋತ್ಪಾದಕ ಮೊಹಮ್ಮದ್ ಗೌಸ್ ಜೊತೆ ದ್ವೇಷ ಅಭಿಯಾನ ನಡೆಸುತ್ತಿದ್ದ. ಅವರು ಪಾಕಿಸ್ತಾನದಲ್ಲಿರುವ ಎಂಟು ಮೊಬೈಲ್ ಸಂಖ್ಯೆಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಉದಯಪುರದ ಮತ್ತೋರ್ವ ಉದ್ಯಮಿಯನ್ನು ಕೊಲೆ ಮಾಡಲು ಸಂಚು ನಡೆಸಿದ್ದರು ಎಂದು ಪೊಲೀಸರಿಗೆ ತಿಳಿದು ಬಂದಿದೆ. ಇದೇ ವೇಳೆ ಎನ್‌ಐಎ ಇನ್ನೂ ಐವರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!