ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದಯಗಿರಿ ಪೊಲೀಸ್ ಠಾಣೆ ಬಳಿ ದಾಂಧಲೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಗಲಾಟೆ ದಿನದ ಭಯಾನಕ ದೃಶ್ಯ ಇದೀಗ ವೈರಲ್ ಆಗಿದೆ.
ಒಂದು ಕ್ಷಣ ಪೊಲೀಸರು ಎಚ್ಚರ ತಪ್ಪಿದ್ದರೂ ಬೇರೆಯದ್ದೇ ಕಥೆಯಾಗುತ್ತಿತ್ತು. ಒಂದೇ ಕ್ಷಣದಲ್ಲಿ ಸಾವಿರ ಸಂಖ್ಯೆಯಲ್ಲಿ ಯುವಕರ ಗುಂಪು ಠಾಣೆ ಮುಂದೆ ಜಮಾಯಿಸಿದ ದೃಶ್ಯ ವೀಡಿಯೋದಲ್ಲಿದೆ.
ವೀಡಿಯೋದಲ್ಲಿ ಪುಂಡರ ಗುಂಪನ್ನು ಡಿಸಿಪಿ ಮುತ್ತುರಾಜು ಸಮಾಧಾನ ಮಾಡಲು ಯತ್ನಿಸಿ ವಿಫಲರಾಗಿರುವುದು ಕಂಡುಬಂದಿದೆ. ಸಾವಿರಾರು ಪುಂಡರ ಗುಂಪಿನಲ್ಲಿ ಬೆರಳೆಣಿಕೆಯಷ್ಟು ಪೊಲೀಸರು ಮಾತ್ರ ನಿಂತು ಕೆಲಸ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಸಾವಿರಕ್ಕಿಂತ ಅಧಿಕ ಮಂದಿ ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡಲು ಯತ್ನಿಸಿದ್ದರು.