ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ಬೆಂಬಲಕ್ಕೆ ಶಿವಸೇನಾ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ನಿಂತಿದ್ದು, ಅವರ ಹೇಳಿಕೆ ಸತ್ಯವಾಗಿದ್ದು, ಸಾರ್ವಜನಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
‘ಗದ್ದರ್’ ರನ್ನು ‘ಗದ್ದರ್’ ಎಂದು ಕರೆಯುವುದು ಯಾರ ಮೇಲಿನ ದಾಳಿಯಲ್ಲ. ಕುನಾಲ್ ಕಾಮ್ರಾ ಅವರು ಯಾವುದೇ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ‘ಗದ್ದರ್’ ಅವರನ್ನು ‘ಗದ್ದರ್’ ಎಂದು ಕರೆಯುವುದರಲ್ಲಿ ತಪ್ಪೇನಿದೆ. ಕುನಾಲ್ ಕಾಮ್ರಾ ಸತ್ಯವನ್ನೇ ಹೇಳಿದ್ದಾರೆ, ಜನರು ಏನು ಭಾವಿಸುತ್ತಾರೆ ಎಂಬುದನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದರು.
ಸತ್ಯವನ್ನೇ ಹೇಳಿದ್ದಾರೆ. ಆದ್ದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ. ಕಾರ್ಯಕ್ರಮದಲ್ಲಿ ಕುನಾಲ್ ಕಾಮ್ರಾ ಅವರು ಹಾಡಿದ ಪೂರ್ಣ ಹಾಡನ್ನು ಕೇಳಿ ಮತ್ತು ಅದನ್ನು ಇತರರಿಗೂ ಕೇಳುವಂತೆ ಮಾಡಿ ಎಂದು ಹೇಳಿದರು.