ಕನ್ಸರ್ಟ್​ನಲ್ಲಿ ಯುವತಿಗೆ ಕಿಸ್ ಮಾಡಿದ ಉದಿತ್ ನಾರಾಯಣ್: ವಿಡಿಯೋ ವೈರಲ್, ಭಾರೀ ಟ್ರೋಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಹಿರಿಯ ಖ್ಯಾತ ಗಾಯಕ ಉದಿತ್ ನಾರಾಯಣ್ ಅವರು ಕನ್ಸರ್ಟ್​ನಲ್ಲಿ ಯುವತಿಯರಿಗೆ ಕಿಸ್ ಮಾಡಿದ್ದು ಭಾರೀ ಟ್ರೋಲ್ ಆಗಿದ್ದಾರೆ.
69 ವರ್ಷದ ಗಾಯಕ ತನ್ನ ಟಿಪ್ ಟಿಪ್ ಬರ್ಸಾ ಪಾನಿ (ಮೊಹ್ರಾ, 1994 ರಿಂದ) ಪ್ರದರ್ಶನದ ಸಮಯದಲ್ಲಿ ಯುವತಿಯರಿಗೆ ಕಿಸ್ ಮಾಡಿದ್ದು ವೈರಲ್ ಆಗಿದೆ.

ಉದಿತ್ ನಾರಾಯಣ್ ಅವರು ಇತ್ತೀಚೆಗಷ್ಟೆ ಲೈವ್ ಕಾನ್ಸರ್ಟ್ ಒಂದನ್ನು ನಡೆಸಿಕೊಟ್ಟರು. ಕಾನ್ಸರ್ಟ್​ ವೇಳೆ ವೇದಿಕೆ ಬಳಿ ಇದ್ದ ಯುವತಿಯೊಬ್ಬಾಕೆ ಹಿರಿಯ ಗಾಯಕನೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು ಉದಿತ್ ನಾರಾಯಣ್ ಸಹ ವೇದಿಕೆ ಮೇಲೆ ಕುಳಿತುಕೊಂಡೆ ಅಭಿಮಾನಿಗೆ ಸೆಲ್ಫಿ ನೀಡಿದರು. ಆದರೆ ಆ ವೇಳೆ ಮಹಿಳಾ ಅಭಿಮಾನಿ ಉದಿತ್ ನಾರಾಯಣ್ ಅವರ ಕೆನ್ನೆಗೆ ಮುತ್ತು ಕೊಟ್ಟಳು. ಕೂಡಲೇ ಉದಿತ್ ನಾರಾಯಣ್, ಆ ಮಹಿಳಾ ಅಭಿಮಾನಿಯನ್ನು ಹಿಡಿದು ಎಳೆದುಕೊಂಡು ತುಟಿಗೆ ತುಟಿ ಒತ್ತಿ ಮುತ್ತು ಕೊಟ್ಟೇ ಬಿಟ್ಟರು.

https://x.com/theprayagtiwari/status/1885406333933150254?ref_src=twsrc%5Etfw%7Ctwcamp%5Etweetembed%7Ctwterm%5E1885406333933150254%7Ctwgr%5Eaa2072e1f7bc46ea7ab8af6f804305f4c266fdb0%7Ctwcon%5Es1_&ref_url=https%3A%2F%2Fkannada.news18.com%2Fnews%2Fentertainment%2Fudit-narayan-reacts-to-backlash-over-his-viral-video-kissing-female-fans-at-a-concert-dvp-1984030.html

ಉದಿತ್ ನಾರಾಯಣ್, ಮಹಿಳಾ ಅಭಿಮಾನಿಗೆ ಮುತ್ತು ಕೊಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರಂತೂ ವಿಡಿಯೋ ಬಗ್ಗೆ ಭಿನ್ನ ಭಿನ್ನ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಇಷ್ಟು ವರ್ಷಗಳಿಂದ ಸಂಪಾದಿಸಿಕೊಂಡು, ಕಾಪಾಡಿಕೊಂಡು ಬಂದಿದ್ದ ಗೌರವವನ್ನು ಉದಿತ್ ನಾರಾಯಣ್ ಒಂದೇ ಸೆಕೆಂಡ್​ನಲ್ಲಿ ಮಣ್ಣುಪಾಲು ಮಾಡಿದ್ದಾರೆ’ ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನು ಕೆಲವರು, ‘ವಯಸ್ಸಾದಂತೆ ಉದಿತ್ ನಾರಾಯಣ್​ಗೆ ಚಪಲ ಹೆಚ್ಚಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಾರೆಯಾಗಿ ಉದಿತ್ ನಾರಾಯಣ್ ಅವರು ವಿಪರೀತ ಟ್ರೋಲ್ ಆಗಿದ್ದಾರೆ.

ಇದೀಗ ಘಟನೆ ಬಗ್ಗೆ ಉದಿತ್ ನಾರಾಯಣ್ ಮಾತನಾಡಿದ್ದಾರೆ, ‘ನಾವು ಆ ರೀತಿಯ ಜನ, ಡೀಸೆಂಟ್ ವ್ಯಕ್ತಿತ್ವ ಉಳ್ಳ ಜನ’ ಎಂದಿದ್ದಾರೆ. ‘ಒಬ್ಬೊಬ್ಬ ಅಭಿಮಾನಿಗಳು ಒಂದೊಂದು ರೀತಿ ಪ್ರೀತಿ ವ್ಯಕ್ತಪಡಿಸುತ್ತಾರೆ. ಅಭಿಮಾನಿ ವ್ಯಕ್ತಪಡಿಸಿದ ಪ್ರೀತಿಗೆ ನಾನು ಪ್ರತಿಕ್ರಿಯಿಸಿದೆನೇ ವಿನಃ ಉದ್ದೇಶಪೂರ್ವಕಾಗಿ ಮಾಡಿದ್ದಲ್ಲ, ಇಂಥಹಾ ವಿಷಯಗಳಿಗೆ ಯಾರೂ ಹೆಚ್ಚು ಗಮನ ಹರಿಸಬಾರದು’ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!