ಹೊಸದಿಗಂತ ವರದಿ ಉಡುಪಿ:
ಜಿಲ್ಲೆಯ 5 ಮತಕ್ಷೇತ್ರದಲ್ಲಿ ಮತಎಣಿಕೆ ನಡೆಯುತ್ತಿದ್ದು, ಕಾಪು ವಿಧಾನಸಭಾ ಕ್ಷೇತ್ರದ ಐದು ಸುತ್ತುಗಳು ಪೂರ್ಣಗೊಂಡಿದ್ದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ 6,283 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ನಾಲ್ಕು ಸುತ್ತಿನ ಅಂತ್ಯದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ, ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರಿಂದ 6,629 ಮತಗಳ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಸುತ್ತು ಪೂರ್ಣಗೊಂಡಿದ್ದು ಬಿಜೆಪಿ ಕಿರಣ್ ಕೊಡ್ಗಿ 9,065 ಮುನ್ನಡೆಯಲ್ಲಿದ್ದಾರೆ. ಕಾರ್ಕಳ 6 ಸುತ್ತು ಪೂರ್ಣಗೊಂಡಿದ್ದು, ಬಿಜೆಪಿ ಸುನೀಲ್ ಕುಮಾರ್ 20,060 ಮುನ್ನಡೆಯಲ್ಲಿದ್ದಾರೆ.
ಬೈಂದೂರಿನಲ್ಲಿ ಬಿಜೆಪಿ ಗುರುರಾಜ್ ಶೆಟ್ಟಿ ಗಂಟಿಹೊಳೆ 3696, ಕಾಂಗ್ರೆಸ್ ನ ಗೋಪಾಲ ಪೂಜಾರಿ 5643 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.