ದಿಗಂತ ವರದಿ ಉಡುಪಿ:
ನಗರದ ಸೈಂಟ್ ಸಿಸಿಲಿ ಶಾಲೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಆರಂಭಗೊಂಡಿದೆ.
ಅಂಚೆ ಮತದಾನದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 580 ಮತಗಳು, ಕಾಂಗ್ರೆಸಿಸ ಜಯಪ್ರಕಾಶ್ ಹೆಗ್ಡೆ 188 ಮತಗಳು ಪಡೆದು, ಬಿಜೆಪಿಗೆ 392 ಮತಗಳ ಮುನ್ನಡೆ ಕಾಯ್ದುಕೊಂಡಿದೆ.
ಇವಿಎಂ ಮತ ಎಣಿಕೆ ಆರಂಭ
ಇವಿಎಂ ಮತ ಎಣಿಕೆ ಮಾಡಲು ಉಡುಪಿ ಡಿಸಿ ಡಾ. ವಿದ್ಯಾಕುಮಾರಿ ಆದೇಶಿಸಿದ್ದು, ಉಡುಪಿ ಎಸ್ಪಿ ಡಾ. ಅರುಣ್ ಕುಮಾರ್ ಸಮ್ಮುಖದಲ್ಲಿ ಇವಿಎಂ ಮತ ಎಣಿಕೆ ಆರಂಭವಾಗಿದೆ.